
KANTHARA: `ಕಾಂತಾರ` ಅವತಾರಕ್ಕೆ ಫಿದಾ ಆದ್ರಾ ಪ್ರಧಾನಿ ನರೇಂದ್ರ ಮೋದಿ...???
`ಕಾಂತಾರ` ಇದೊಂದು ಕೇವಲ ಸಿನಿಮಾವಲ್ಲ, ಒಂದು ದಂತೆ ಕಥೆಯೇ ಸರಿ. ಯಾಕಂದ್ರೆ ಈಗಾಗಲೇ ಈ ಚಿತ್ರವನ್ನ ನೋಡಿರುವಂತಹ ಪ್ರೇಕ್ಷಕರು ಮೂಕವಿಸ್ಮತರಾಗಿದ್ದಾರೆ. ಇದರ ಅಬ್ಬರ ಕಂಡು ಇಡೀ ಚಿತ್ರರಂಗವೇ ಬೆಚ್ಚಿ ಬಿದ್ದಿದೆ.
ಕೇವಲ ಕನ್ನಡ ಚಿತ್ರರಂಗ ಬೆಚ್ಚಿ ಬಿದ್ದಿಲ್ಲ, ಬದಲಾಗಿ ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಲ್ಲವೂ ಕಾಂತಾರದ ಹೊಡೆತಕ್ಕೆ ತತ್ತರಿಸಿದೆ. ಇದೀಗ ಕಾಂತಾರ ಅನ್ನೋ ಹೆಸರು ಇಡೀ ಭಾರತದಾದ್ಯಂತ ಬಾಯಿಂದ ಬಾಯಿಗೆ ಹರಡಿ ಕ್ರೇಜ್ಹ್ ಹುಟ್ಟಿಸಿದೆ.
ಇದೀಗ ಭಾರತದ ಪ್ರಧಾನಿ ಮೋದಿಯವರ ಸರದಿ. ಹೌದು ಪ್ರಧಾನಿ ಮೋದಿ ನ.11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಏರ್ ಪೋರ್ಟ್ ನ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಒಂದು ಅಚ್ಚರಿಯ ಸಂಗತಿ ಏನಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂತಾರ ಚಲನಚಿತ್ರವನ್ನ ವೀಕ್ಷಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಇವರಿಗೆ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಕಾಂತಾರ ಚಿತ್ರ ತಂಡ ಸಾಥ್ ನೀಡಲಿದೆಯಂತೆ. ಜೊತೆಗೆ ಬಿಜೆಪಿ ನಾಯಕರು ಮೋದಿ ಜೊತೆ ಕೂತು ಚಿತ್ರವೀಕ್ಷಣೆ ಮಾಡುವ ಬಗ್ಗೆ ಮಾತುಗಳು ಕೇಳಿ ಬರ್ತಾ ಇವೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಲಿದೆ.