
KPTCL ಹಗರಣ: ಜಾಮೀನಿನಿಂದ ಹೊರ ಬರುತ್ತಲೇ ಪ್ರಮುಖ ಆರೋಪಿ ಸಿಐಡಿ ಬಲೆಗೆ!
Wednesday, October 19, 2022
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ನಾಗಪ್ಪ ಶಿವಪ್ಪ ದೊಡ್ಡಮನಿ (27) ಹಾಗೂ ಗೋಕಾಕದ ಯಲ್ಲಪ್ಪ ಮಹದೇವ ರಕ್ಷಿ (26) ಬಂಧಿತ ಆರೋಪಿಗಳು.
ಆರೋಪಿಗಳಿಗೆ ಜಾಮೀನು
ಇನ್ನು ಈಗಾಗಲೇ KPTCL ಹಗರಣದಲ್ಲಿ ಬಂಧಿತರಾದ 20 ಮಂದಿ ಆರೋಪಿಗಳಿಗೆ ಗೋಕಾಕದ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಮುಖ ಆರೋಪಿ ಲಕ್ಷ್ಮಣ ಭಂಡಾರಿ ಸೇರಿದಂತೆ 20 ಮಂದಿಗೂ ಷರತ್ತುಬದ್ಧ ಜಾಮೀನು ನೀಡಿತು.
ಕಾದು ಕುಳಿತ ಸಿಐಡಿ
ಜಾಮೀನು ಮೇಲೆ ಬಿಡುಗಡೆ ಹೊಂದಿದ ಪ್ರಮುಖ ಆರೋಪಿ ಸಂಜೀವ ಭಂಡಾರಿ ಹಿಂಡಲಗಾ ಜೈಲಿನಿಂದ ಹೊರ ಬರುತ್ತಲೇ ಸಿಐಡಿ ಅಧಿಕಾರಿಗಳು ಆತನನ್ನು ಮತ್ತೆ ಬಂಧಿಸಿದ್ದಾರೆ.