
Kanthara: ರಿಷಬ್ ಅಭಿನಂದಿಸಿದ ರಜನಿಕಾಂತ್; ತಲೈವಾಗೆ ರಿಷಬ್ ಹೇಳಿದ್ದೇನು!?
Saturday, October 29, 2022
ಬೆಂಗಳೂರು: 'ಕಾಂತಾರ' ಚಿತ್ರ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಹೊಸತೊಂದು ವೇದಿಕೆ ಕಲ್ಪಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಅವರನ್ನು ಕೊಂಡಾಡುತ್ತಿದೆ. ಈ ಮಧ್ಯೆ ಖ್ಯಾತ ಚಿತ್ರನಟ ರಜನಿಕಾಂತ್ ಕೂಡಾ 'ಕಾಂತಾರ' ಚಿತ್ರ ನೋಡಿ ಖುಷಿಪಟ್ಟಿದ್ದರು.
ಮಾತ್ರವಲ್ಲದೇ, ಇದೀಗ ಅವರ ನಿವಾಸಕ್ಕೆ ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರನ್ನು ಕರೆದು ಅಭಿನಂದಿಸಿದ್ದಾರೆ. ಚಿತ್ರದ ಬಗ್ಗೆ ತಲೈವಾ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲೇ ನಡೆದ ಸಂಭಾಷಣೆ ವೇಳೆ ರಿಷಬ್, ಸಾರ್.. ನೀವು ಒಂದ್ಸಲ ಹೊಗಳಿದರೆ ನೂರು ಸಲ ಹೊಗಳಿದಂಗೆ ಅಂತಾ ಟ್ವೀಟ್ ಮೂಲಕ ತಿಳಿಸಿದ್ದಾರೆ.