
ಮಂಗಳೂರು| ಧರಣಿ ಸ್ಥಳದಲ್ಲೇ ರಾತ್ರಿ ಕಳೆದ ಮಾಜಿ ಸಚಿವ
Saturday, October 29, 2022
ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ವಿರುದ್ಧದ ಎರಡನೇ ಹಂತದ ಹೋರಾಟ ಆರಂಭವಾಗಿದೆ. ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಮಾಜಿ ಸಚಿವ ಅಭಯಚಂದ್ರ ಜೈನ್ ಧರಣಿ ಸ್ಥಳದಲ್ಲೇ ರಾತ್ರಿ ಕಳೆದರು.
ನಿನ್ನೆ ಬೆಳಿಗ್ಗೆ ಪ್ರತಿಭಟನೆ ಆರಂಭಗೊಂಡಾಗ ಆಗಮಿಸಿದ್ದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್ ಬಳಿಕ ತೆರಳಿದ್ದರು. ರಾತ್ರಿಯಾಗುತ್ತಲೇ ಚಾಪೆ, ಬೆಡ್ ಶೀಟ್ ಹಾಗೂ ತಲೆದಿಂಬು ಸಹಿತ ಆಗಮಿಸಿದ ಮಾಜಿ ಸಚಿವರು, ಧರಣಿ ಸ್ಥಳದಲ್ಲೇ ರಾತ್ರಿ ಉಳಿದುಕೊಂಡರು. ಹಲವು ಹೋರಾಟಗಾರರು, ಪಕ್ಷದ ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದರು.