
ಕಾಣಿಯೂರು ಅನೈತಿಕ ಪೊಲೀಸ್ ಗಿರಿ ಪ್ರಕರಣ; ಆರು ಮಂದಿ ಅರೆಸ್ಟ್
Monday, October 24, 2022
ಕಡಬ: ಮಹಿಳೆ ಮಾನಭಂಗ ಆರೋಪಿಸಿ ಇಬ್ಬರು ಬಟ್ಟೆ ವ್ಯಾಪಾರಿಗಳ ಮೇಲೆ ದಾಳಿಗೈದು ಮಾರಣಾಂತಿಕ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಪುನೀತ್, ರಾಜು , ಕಿಶೋರ್, ಭವಿತ್, ರಂಜಿತ್ ಮತ್ತು ಪ್ರಸಾದ್ ಬಂಧಿತರು.
ಅಕ್ಟೋಬರ್ 20 ರಂದು ಜವಳಿ ವ್ಯಾಪಾರಿಗಳಾದ ರಮೀಝುದ್ದೀನ್ ಮತ್ತು ರಫೀಕ್ ಎಂಬಿಬ್ಬರು ಯುವಕರು ಬಟ್ಟೆ ವ್ಯಾಪಾರಕ್ಕೆಂದು ಕಾರಿನಲ್ಲಿ ಕಡಬ ತಾಲೂಕಿನ ಕಾಣಿಯೂರಿಗೆ ತೆರಳಿದ್ದರು. ಈ ಸಂದರ್ಭ ಮಹಿಳೆ ಸರಗಳ್ಳತನ ಹಾಗೂ ಮಾನಭಂಗ ಆರೋಪಿಸಿ ವಾಪಸ್ ತೆರಳುತ್ತಿದ್ದ ವೇಳೆ ಇವರಿಬ್ಬರ ಮೇಲೆ ಸುಮಾರು 25 ಜನರಷ್ಟಿದ್ದ ಗುಂಪು ಅನೈತಿಕ ಪೊಲೀಸ್ ಗಿರಿ ಮೆರೆದಿತ್ತು.
ಘಟನೆ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನೆ ಸಂಬಂಧ ಎರಡೂ ಕಡೆಯಿಂದಲೂ ದೂರು ದಾಖಲಾಗಿತ್ತು. ಹಲ್ಲೆ ಘಟನೆ ವೀಡಿಯೋ ಆಧರಿಸಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.