-->
T-20 ವಿಶ್ವಕಪ್: ಇಂದು ಭಾರತ-ಪಾಕ್ ಮುಖಾಮುಖಿ!; ಗೆಲ್ಲುವ ಫೇವರಿಟ್ ಯಾರು!?

T-20 ವಿಶ್ವಕಪ್: ಇಂದು ಭಾರತ-ಪಾಕ್ ಮುಖಾಮುಖಿ!; ಗೆಲ್ಲುವ ಫೇವರಿಟ್ ಯಾರು!?



ಮೆಲ್ಬರ್ನ್: ಟಿ-20 ವಿಶ್ವಕಪ್ ನ ಮೈದಾನದಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ತಂಡಗಳು ಮುಖಾಮುಖಿಯಾಗಲಿದೆ. ಭಾರತ-ಪಾಕಿಸ್ತಾನ ಜಿದ್ದಾಜಿದ್ದಿಗೆ ಮೆಲ್ಬರ್ನ್‌ನ ಎಂಜಿಸಿ ಮೈದಾನ ಸಾಕ್ಷಿಯಾಗಲಿದೆ. ಆಸ್ಟ್ರೇಲಿಯಾ ಪಿಚ್ ನಲ್ಲಿ ಭಾರತ-ಪಾಕಿಸ್ತಾನ ಸಮಬಲದ ಹೋರಾಟ ನೀಡುವ ನಿರೀಕ್ಷೆ ಇದೆ. 

ಘಟಾನುಘಟಿ ಆಟಗಾರರನ್ನು ಹೊಂದಿರುವ ಇತ್ತಂಡಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಆಸಿಸ್ ಪಿಚ್ ನಲ್ಲಿ ಪಾಕಿಸ್ತಾನಕ್ಕೆ ಹೋಲಿಸಿದ್ದಲ್ಲಿ, ಭಾರತದ ಇತ್ತೀಚಿನ ಸಾಧನೆ ಉತ್ತಮವಾಗಿದ್ದು ಗೆಲ್ಲುವ ಫೇವರಿಟ್ ತಂಡವಾಗಿ ಭಾರತ ಕಾಣಿಸಿಕೊಂಡಿದೆ. ಅದಾಗ್ಯೂ, ಇತ್ತಂಡಗಳಲ್ಲಿ ಸಾಕಷ್ಟು ಆಟಗಾರರು ಪಂದ್ಯದ ಗತಿಯನ್ನೇ ಬದಲಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ರೋಹಿತ್ vs ಬಾಬರ್ 

ರೋಹಿತ್ ನೇತೃತ್ವದ ಭಾರತ ತಂಡದಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಯುವ ಆಟಗಾರ ಸೂರ್ಯ ಕುಮಾರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚಿನ ಬ್ಯಾಟಿಂಗ್ ನಿರೀಕ್ಷೆ ಇದೆ. ಬೌಲಿಂಗ್ ವಿಭಾಗದಲ್ಲಿ ಕಣಕ್ಕಿಳಿದ್ದಲ್ಲಿ ಶಮಿ, ಚಾಹಲ್, ಅಕ್ಚರ್, ಭುವನೇಶ್ವರ್, ಅರ್ಶ್ ದೀಪ್ ಕೂಡಾ ಮಿಂಚುವ ಒತ್ತಡದಲ್ಲಿದ್ದಾರೆ. 

ಬಾಬರ್ ಅಜಂ ನೇತೃತ್ವದ ಪಾಕ್ ತಂಡದ ಸ್ಟಾರ್ ಆಟಗಾರ ರಿಝ್ವಾನ್, ಆಸಿಫ್ ಅಲಿ ಸಹಜವಾಗಿಯೇ ಟೀಂ ಇಂಡಿಯಾ ಮೇಲೆ ಒತ್ತಡ ಬೀರಬಹುದು. ಆದರೆ ಪಾಕಿನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಉತ್ತಮ ಲಯ ಕಂಡುಕೊಳ್ಳದಿದ್ದಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗಬಹುದು. 

ವೇಗಿಗಳಿಗೆ ಪೂರಕ ಪಿಚ್

ಆಸ್ಟ್ರೇಲಿಯಾದ ಪಿಚ್ ವೇಗಿಗಳಿಗೆ ಹೆಚ್ಚು ಪೂರಕವಾಗಿದ್ದು ಇತ್ತಂಡಗಳ ಭುವಿ, ಶಮಿ, ಅಕ್ಷರ್ ಹಾಗೂ ಪಾಕ್ ತಂಡ ಶಹೀನ್ ಅಫ್ರಿದಿ, ನಸೀಂ ಶಾ, ಹಾರೀಸ್ ರೌಫ್ ಮಿಂಚುವ ಸಾಧ್ಯತೆ ಇದೆ. 

ಮಧ್ಯಾಹ್ನ ಪಂದ್ಯ ಆರಂಭ

ಟೀಂ ಇಂಡಿಯಾ ಹಾಗೂ ಪಾಕ್ ನಡುವಿನ ಇಂದಿನ ಪಂದ್ಯವು ಮಧ್ಯಾಹ್ನ 1.30 ಕ್ಕೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಆರಂಭವಾಗಲಿದೆ. 

Ads on article

Advertise in articles 1

advertising articles 2

Advertise under the article