-->
 PUTTUR: ನಾಳೆ ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ಹಿಂದೂ ಜಾಗರಣ ವೇದಿಕೆ ಕರೆ

PUTTUR: ನಾಳೆ ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ಹಿಂದೂ ಜಾಗರಣ ವೇದಿಕೆ ಕರೆ


ಪುತ್ತೂರು: ನಗರದ ದರ್ಬೆಯಲ್ಲಿ ವರ್ತಕ ಮೇಲೆ ನಡೆದ ಅಮಾನವೀಯ ದಾಳಿ, ಪೊಲೀಸರ ಎದುರಲ್ಲೇ ಮಹಿಳೆಯ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ಜೀಪಿನೊಳಗಿಂದಲೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಆ.25ರಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದೆ.

ಈ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿರುವ ವೇದಿಕೆ, ಪ್ರಕರಣಗಳ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ವ್ಯವಸ್ಥಿತ ಪಿತೂರಿ ಇರುವುದಾಗಿ ಆರೋಪಿಸಿದೆ. ನಗರದಲ್ಲಿ ವರ್ತಕರ ಹಿತರಕ್ಷಣೆ, ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪುತ್ತೂರಿನ ಎಲ್ಲ ಸಮಾಜ ಬಾಂಧವರು ಹಾಗೂ ನಾಗರಿಕರು ಆ.25ರಂದು ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.

ಈ ಕುರಿತು ಆ.24ರಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ‌ ಮೋಹನ್ ದಾಸ್ ಕಾಣಿಯೂರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article