-->
Priyadarshini Fraud Case: ಗ್ರಾಹಕನಿಗೆ ವಂಚನೆ ಪ್ರಕರಣ; ಯೂಟ್ಯೂಬ್ ಚಾನೆಲ್‌ ವರದಿಗೆ ತಡೆ!?

Priyadarshini Fraud Case: ಗ್ರಾಹಕನಿಗೆ ವಂಚನೆ ಪ್ರಕರಣ; ಯೂಟ್ಯೂಬ್ ಚಾನೆಲ್‌ ವರದಿಗೆ ತಡೆ!?

ಮಂಗಳೂರು: ತನ್ನ ಗ್ರಾಹಕನಿಗೆ ವಂಚಿಸಿದ ಪಡುಬಿದ್ರಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ವಿರುದ್ಧದ ವರದಿ ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿತ್ತು. ಸುರತ್ಕಲ್‌ನ ಚೇಳಾರು ಗ್ರಾಮದ ನಿವಾಸಿ ನಾಗೇಶ್ ಎಂಬವರ 66 ಸೆಂಟ್ಸ್ ಜಾಗವನ್ನು ಅಡಮಾನವಿಟ್ಟು ಬ್ಯಾಂಕ್‌ಗೆ ಸಂಬಂಧಿಸಿದವರೇ 20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಕುರಿತಂತೆ ಪಡುಬಿದ್ರಿ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿ, FIR ದಾಖಲಿಸಲಾಗಿತ್ತು. 

ಅನಂತರ 'ದಿ ಜರ್ನಲಿಸ್ಟ್ ಕನ್ನಡ' ಎನ್ನುವ ಯೂಟ್ಯೂಬ್ ಚಾನೆಲ್‌ವೊಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸವಿಸ್ತಾರವಾಗಿ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಿಗೆ ಹಳೆಯಂಗಡಿಯಲ್ಲಿ ಪ್ರಧಾನ ಶಾಖೆ ಹೊಂದಿರುವ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲೀಗಲ್ ನೋಟೀಸ್ ಜಾರಿಗೊಳಿಸಿದೆ ಎನ್ನಲಾಗಿದೆ. 
ಹೀಗಾಗಿ 'ದಿ ಜರ್ನಲಿಸ್ಟ್ ಕನ್ನಡ' ಯೂಟ್ಯೂಬ್ ತನ್ನ ವರದಿಯನ್ನು ಸ್ಥಗಿತಗೊಳಿಸಿದ್ದಾಗಿ, ತನ್ನ ಯೂಟ್ಯೂಬ್ ಪೋಸ್ಟ್‌ನಲ್ಲಿ ತಿಳಿಸಿದೆ. ಕಾನೂನು ನೋಟೀಸ್‌ಗೆ ತಲೆಬಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೋಸ್ಟ್ ಮಾಡಿದೆ.

Ads on article

Advertise in articles 1

advertising articles 2

Advertise under the article