-->
PUTTUR: ಪುತ್ತೂರುನಲ್ಲಿ ಯುವಕನಿಗೆ ಭಯ ಹುಟ್ಟಿಸಿದ `ದೆವ್ವ'!!!

PUTTUR: ಪುತ್ತೂರುನಲ್ಲಿ ಯುವಕನಿಗೆ ಭಯ ಹುಟ್ಟಿಸಿದ `ದೆವ್ವ'!!!


ಪುತ್ತೂರು: ವಿಜ್ಞಾನವನ್ನೇ ನಂಬುವ ಜನ, ಈ ಕಾಲಘಟ್ಟದಲ್ಲೂ ಪ್ರೇತ ಇದೆ ಎಂದೆರೆ ನಂಬಲು ಸಾಧ್ಯವೇ...ಹೌದು ಆಧುನಿಕ ಕಾಲಘಟ್ಟದಲ್ಲೂ ಪ್ರೇತ, ದೆವ್ವ ಅನ್ನುವಂತದ್ದು ಇದೆ ಎಂಬುದಕ್ಕೆ ಸಾಕ್ಷಿ ಪುತ್ತೂರಿನ ಕಿಜಾನ ಎಂಬಲ್ಲಿ ದೊರೆತಿದೆ. ಪೆರಿಯಡ್ಕದಿಂದ ಕಾಂಚಾಣಕ್ಕೆ ಸಂಪರ್ಕಿಸುವ ರಸ್ತೆಯ ಕಿಜಾನ ಎಂಬಲ್ಲಿ ದೆವ್ವವೊಂದು ಹಲವು ದಿನಗಳಿಂದ ಕೆಲವರಿಗೆ ಪ್ರತ್ಯಕ್ಷಗೊಂಡಿದೆ. ಇದು ಸತ್ಯಕ್ಕೆ ದೂರುವಾದ್ರೂ ನಂಬಲೇ ಬೇಕಾಗಿದೆ. ಯಾಕಂದ್ರೆ ದೆವ್ವವನ್ನ ಪ್ರತ್ಯಕ್ಷವಾಗಿ ಬೈಕ್ ಸವಾರನೋರ್ವ ನೋಡಿ ಬೆಚ್ಚಿಬಿದ್ದಿದ್ದಾನೆ. 

ಪೆರಿಯಡ್ಕದಿಂದ ಕಾಂಚಣ ಕಡೆಗೆ ರಾತ್ರಿ 10:30ರ ಸುಮಾರಿಗೆ ಬೈಕ್ ನಲ್ಲಿ ಹೊರಟಿದ್ದ ಯುವಕನೋರ್ವ ಕಿಜಾನ ಎಂಬ ಪ್ರದೇಶ ಸಮೀಪಿಸುತ್ತಿದ್ದಂತೆ ಒಬ್ಬಳು ಹೆಣ್ಣು ಡ್ರಾಪ್ ಕೇಳಿದ್ದಾಳೆ. ಹಸಿರು ಬಣ್ಣದ ಸೀರೆ ಧರಿಸಿದ್ದ ಹೆಣ್ಣು, ಉದ್ದ ಕೂದಳು ಬಿಟ್ಟಿದ್ದಳು. ಯುವಕನಲ್ಲಿ ಡ್ರಾಪ್ ಕೇಳಲು ಬೈಕ್ ನಿಲ್ಲಿಸಿದ್ದಾಳೆ.  ಬಳಿಕ ಯುವಕನಿಗೂ ಆಕೆಯಲ್ಲಿ ಆ ಹೊತ್ತಿನಲ್ಲಿ ಏನೂ ಕೇಳಲು ತೋಚದೆ ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಆದ್ರೆ ಬೈಕ್ ಹಿಂಬದಿ ಕುಳಿತ್ತಿದ್ದಾರೆಯೇ ಎಂದು ತಿರುಗುತ್ತಿದ್ದಂತೆ ಆ ಹಸಿರು ಸೀರೆಯ ಹೆಣ್ಣು ಮಾಯವಾಗಿದ್ದಾಳೆ. ಇಂತಹ ಅದೆಷ್ಟೋ ಕಥೆಗಳನ್ನ ಕೇಳಿರಬಹುದು. ಆದ್ರೆ ಇಂತಹ ಸತ್ಯದರ್ಶನ ಆಗಿದ್ದು ಆ ಯುವಕನಿಗೆ ಎಲ್ಲಿಲ್ಲದ ಭಯವನ್ನುಂಟು ಮಾಡಿದೆ. 

ಇದೀಗ ಆ ಊರಿನಲ್ಲಿ ದೆವ್ವ ಇದೆಯಂತೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಕಿಜಾನೆ ಎಂಬ ಭಾಗದಲ್ಲಿ ದಾರಿ ದೀಪವಿಲ್ಲ. ಹಾಗಾಗಿ ಆ ಭಾಗದಲ್ಲಿ ದಟ್ಟ ಕಗ್ಗತ್ತಲೆ ಇರುವುದರಿಂದ ಇಂತಹ ಅನುಭವ ಆಗಿರುವುದು ಇದೀಗ ಆ ಊರಿನ ಜನರ ನಿದ್ದೆಗೆಡಿಸಿದೆ.

Ads on article

Advertise in articles 1

advertising articles 2

Advertise under the article