-->
PUTTUR: ಪುತ್ತೂರಿನ ಈ ಊರಿನವ್ರು ಪೇಟೆ ನೋಡೋದೇ ಅಪರೂಪ!!

PUTTUR: ಪುತ್ತೂರಿನ ಈ ಊರಿನವ್ರು ಪೇಟೆ ನೋಡೋದೇ ಅಪರೂಪ!!

 


ಪುತ್ತೂರು: ಅದು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ನೀರೋಳ್ಯ ಎಂಬ ಪ್ರದೇಶ. ಈ ಊರಿನಲ್ಲಿ ಸುಮಾರು 10ರಿಂದ 15 ಕುಟುಂಬಗಳು ವಾಸಿಸುತ್ತಿದ್ದಾರೆ. ಆದ್ರೆ ಆ ಕುಟುಂಬಗಳ ದಿನ ನಿತ್ಯದ ಕಷ್ಟ ನೋಡಿದ್ರೆ ಯಾರೂ ಅತ್ತ ಹೋಗಲ್ಲ. ಹೌದು ಚುನಾವಣೆ ಸಂದರ್ಭಗಳಲ್ಲಿ ಹೇಗಾದ್ರೂ ಒಂದು ದಿನ ರಾಜಕೀಯ ಮುಖಂಡರುಗಳು ಆ ಊರಿನ ಜನರ ಕೈಕಾಲು ಹಿಡಿದು ಮತ ಕೇಳಲು ಬರುತ್ತಾರೆ. ಬಳಿಕ ಯಾರು ಅಲ್ಲಿ ಜನಪ್ರತಿನಿದಿಯಾಗಿರುತ್ತಾನೋ ಆತ ಬರೋದು ಮುಂದಿನ ಚುನಾವಣೆ ವೇಳೆ. ಅಂದ್ರೆ ಜನಪ್ರತಿನಿಧಿಯಾದವನೂ ಕೂಡ ಇಲ್ಲಿನ ಜನರ ಕಷ್ಟವನ್ನ ಕಣ್ಣಾರೆ ಕಂಡಿದ್ರೂ ಬೇಡಿಕೆಯನ್ನ ಇಲ್ಲೀವರೆಗೂ ಈಡೇರಿಸಿಲ್ಲ. 


ಯಸ್ ಸ್ವಾತಂತ್ರ್ಯ ದೊರಕಿ ಸರಿ ಸುಮಾರು 78 ವರ್ಷ ಕಳೆದ್ರೂ ನೀರೋಳ್ಯ ಭಾಗದ ಜನರಿಗೆ ಸರಿಯಾದ ರಸ್ತೆ, ಸೇತುವೆ ಸಂಪರ್ಕವಿಲ್ಲದೇ ಮೂಲಸೌಕರ್ಯವನ್ನೇ ಕಳದುಕೊಂಡಿದ್ದಾರೆ. ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿ ಸುಸ್ತಾಗಿದ್ದಾರೆ. ಇನ್ನು ಮಳೆಗಾಲದ ಸಂದರ್ಭಗಳಲ್ಲಿ ಆಳೆತ್ತರಕ್ಕೆ ನೀರು ಹರಿಯುವುದರಿಂದ ಆ ಭಾಗದ ಜನ ಕೆಲಸಕ್ಕೂ ಹೋಗಲೂ ಅಸಾಧ್ಯವೆಂಬ ಪರಿಸ್ಥಿತಿ ಇದೆ. ಜೊತೆಗೆ ಶಾಲಾ ಮಕ್ಕಳಂತೂ ಮಳೆಗಾಲದ ಸಂದರ್ಭ ರಜೆ ಹಾಕಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ. ಕೆಲವರಂತೂ ಮಳೆಗಾಲದ ವೇಳೆ ಮನೆ ಬಿಟ್ಟು ತೋಡಿನ ಇನ್ನೊಂದು ಪಕ್ಕದಲ್ಲಿರುವ ಮನೆಗಳಲ್ಲಿ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಇನ್ನು ಹಿರಿಯ ನಾಗರಿಕರಂತೂ ಮಳೆಗಾಲ ಮುಗಿದ ಬಳಿಕವೇ ಮನೆಯಿಂದ ಹೊರಬರಬೇಕಾದಂತ ಸ್ಥಿತಿ ಆ ಊರಿನಲ್ಲಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕ, ಸೇತುವೆ ಇಲ್ಲದೇ ಪೇಟೆಯನ್ನ ಆ ಊರಿನ ಜನ ನೋಡೋದೇ ಅಪರೂಪವಾಗಿದೆ. ಪಕ್ಕದ ಗ್ರಾಮಗಳ ಸಂಪರ್ಕವೂ ಕಡಿತಗೊಳ್ಳುತ್ತದೆ. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ತುರ್ತು ಚಿಕಿತ್ಸೆ ಸಿಗದೇ ಅದೆಷ್ಟೋ ಆ ಭಾಗದ ಜನರು ಮೃತಪಟ್ಟಿರುವ ಉದಾಹರಣೆಗಳು ಇವೆ. ರೋಗಿಗಳನ್ನಂತೂ ಹೊತ್ತುಕೊಂಡೇ ಹೋಗ ಬೇಕಾದ ಪರಿಸ್ಥಿತಿ ಇಲ್ಲಿನದ್ದು....


ದೇವಸ್ಯ-ನೀರೊಳ್ಯ ಕಡಂದೇಳು ಸಂಪರ್ಕಿಸುವ ಈ ಭಾಗದಲ್ಲಿ ಇದೀಗ ಸ್ವತಃ ಆ ಊರಿನ ಕಾಲನಿ ನಿವಾಸಿಗಳು ತಮ್ಮ ಸ್ವಂತ ಹಣ ತಾವೇ ಹಾಕಿ 2 ಕಿಲೋ ಮೀಟರ್ ರಸ್ತೆಯನ್ನ ಮಾಡಿಕೊಂಡಿದ್ದಾರೆ. ಇದಕ್ಕೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕೈಜೋಡಿಸಿದ್ದು, ಆಟೋ ಹೋಗುವಷ್ಟು ರಸ್ತೆಯನ್ನ ಸಂಚಾರಕ್ಕೆ ತಕ್ಕಂತೆ ನಿರ್ಮಿಸಿಕೊಟ್ಟಿದ್ದಾರೆ. ಆದ್ರೆ ಕಿರು ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗದೇ ನೀರಿನ ತೋಡಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಿದ್ದಾರೆ. ಆದ್ರೆ ಮಳೆಗಾಲದಲ್ಲಂತೂ ಮಣ್ಣು ನೀರಿನ ಜೊತೆಗೆ ಕೊಚ್ಚಿ ಹೋಗದಂತೂ ಗ್ಯಾರಂಟಿ. ಹಾಗಾಗಿ ಮಳೆಗಾಲದ ಮೊದಲು ಒಂದು ಕಿರು ಸೇತುವೆ ಮಾಡಿ ಕೊಡಿ ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಮಾಡಿ ಕೆಲ ತಿಂಗಳುಗಳೇ ಕಳೆದಿವೆ. ಆದ್ರೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ಹಾಗಾಗಿ ಸದ್ಯದಲ್ಲೇ ಕಿರು ಸೇತುವೆ ನಿರ್ಮಿಸಿಕೊಡದಿದ್ದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿದೆ.


ಇನ್ನು ನೀರೊಳ್ಯ ಭಾಗದಲ್ಲಿ ರಸ್ತೆ ಸಮಸ್ಯೆ ಇರೋದು ನಿಜ ಅಂತ ಪಾಣಾಜೆ ಪಂಚಾಯತ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಹಿಂದೆ ರಸ್ತೆ ನಿರ್ಮಿಸಿಕೊಡುವಂತೆ ದಲಿತ ಕುಟುಂಬವೊಂದು ಪಂಚಾಯತ್ ಗೆ ದೂರು ನೀಡಿದ್ದರು. ಬಳಿಕ ಇದೀಗ ಅಲ್ಲಿನವರೇ ಕಿರಿದಾದ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಕಿರು ಸೇತುವೆಗೆ ಶಾಸಕ ಅಶೋಕ್ ರೈ ಅವರು ಅನುದಾನ ಇಟ್ಟಿದ್ದಾರೆ, ಹಣ ಬಂದ ತಕ್ಷಣವೇ ಕಾಮಗಾರಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೇ 16ನೇ ಹಣಕಾಸಿನ ಯೋಜನೆಯ ಮೂಲಕ ನೀರೋಳ್ಯ ಭಾಗದ ಜನರಿಗೆ ರಸ್ತೆಯನ್ನ ನಿರ್ಮಿಸಿಕೊಡುತ್ತೇವೆ ಎಂದು ಪಾಣಾಜೆ ಗ್ರಾಮ ಪಂಚಾಯತ್ ಪಿಡಿಒ ಹೇಳಿದ್ದಾರೆ..

ಒಟ್ಟಿನಲ್ಲಿ 80 ವರ್ಷಗಳಿಂದ ನೀರೋಳ್ಯ ಭಾಗದ ಜನ ರಸ್ತೆ, ಸೇತುವೆ ಸಂಪರ್ಕವಿಲ್ಲದೇ ಪಡುತ್ತಿರುವ ಕಷ್ಟಕ್ಕೆ ಇನ್ನಾದ್ರೂ ಮುಕ್ತಿ ಸಿಗುತ್ತೋ ಅನ್ನೋದನ್ನ ಕಾದು ನೋಡಬೇಕಿದೆ...


Ads on article

Advertise in articles 1

advertising articles 2

Advertise under the article