MANGALURU: ನರೇಗಾ ಬಚಾವೊ ಸಂಗ್ರಾಮ್ ಪಾದಯಾತ್ರೆ ಯಶಸ್ವಿ!!!
ಮಂಗಳೂರು: ಕೇಂದ್ರ ಸರ್ಕಾರವು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ನಿಯಮ ಬದಲಾವಣೆ ಮಾಡಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ 4 ದಿನಗಳ ನರೇಗಾ ಬಚಾವೊ ಸಂಗ್ರಾಮ್ ಪಾದಯಾತ್ರೆ ಯಶಸ್ವಿಯಾಗಿದೆ.
ಹೌದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪಾದಯಾತ್ರೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಬಿಜೆಪಿಗೆ ಠಕ್ಕರ್ ಕೊಡುವಲ್ಲಿ ಸಫಲರಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ನ ಜಿಲ್ಲಾ ಘಟಕದ ಅಧ್ಯಕ್ಷರನ್ನ ಬದಲಾವಣೆ ಮಾಡಬೇಕು ಎಂದು ಕೆಲ ಕಾರ್ಯಕರ್ತರು ರಂಪಾಟ ಮಾಡಿದ್ದರು. ಆದ್ರೆ ಇದೀಗ ಹರೀಶ್ ಕುಮಾರ್ ಅವರ ಕಾರ್ಯವೈಖರಿಯನ್ನ ನೋಡಿ ಈ ಹಿಂದೆ ಯಾರು ಅವರನ್ನ ಹೀಯಾಲಿಸಿದ್ದರೋ ಅವರೇ ಸುಳ್ಯ-ಮೂಲ್ಕಿ ಪಾದಯಾತ್ರೆಯನ್ನ ನೋಡಿ ನಿಬ್ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ನ ಮತ್ತು ಕಾರ್ಯಕರ್ತರ ಹುಮ್ಮಸ್ಸು ಎಂತದ್ದು ಎಂಬುದನ್ನ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರು ಜಿಲ್ಲೆಯ ಬಿಜೆಪಿ ನಾಯಕರಿಗೆ ತೋರಿಸಿಕೊಟ್ಟಿದ್ದರೆ. ಈ ಮೂಲಕ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ನಿಯಮ ಬದಲಾವಣೆಯನ್ನ ಕೂಡಲೇ ಕೈಬಿಡಬೇಕು ಎಂಬ ಎಚ್ಚರಿಕೆಯನ್ನ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.
ನರೇಗಾದ ಮೂಲಕ ಗ್ರಾಮ ಪಂಚಾಯಿತಿಗೂ ಉತ್ತಮ ಅನುದಾನ ಮತ್ತು ಹಲವು ಯೋಜನೆ ರೂಪಿಸಲು ಸಹಾಯಕವಾಗಿತ್ತು. ಯೋಜನೆಯನ್ನ ಪುನರ್ ಸ್ಥಾಪಿಸಲು ಒತ್ತಾಯಿಸಿ ಈ ಪಾದಯಾತ್ರೆಯನ್ನ ಟೊಂಕಕಟ್ಟಿ ನಿಂತು ಯಶಸ್ವಿಗೊಳಿಸಿದ್ದಲ್ಲದೇ, ಜಿಲ್ಲಾಧ್ಯಕ್ಷನಾಗಿ ಕಾಂಗ್ರೆಸ್ ಗೆ ಹೇಗೆ ಕೆಲಸ ಮಾಡಬೇಕು ಎಂಬುದನ್ನ ಸಾಬೀತುಪಡಿಸಿದ್ದಾರೆ.
ಹರೀಶ್ ಕುಮಾರ್ ಅವರು ಸುಳ್ಯದಿಂದ ಆರಂಭಗೊಂಡು ಮೂಲ್ಕಿವರೆಗೂ ಸುಮಾರು 100 ಕಿ.ಮೀ `ನರೇಗಾ ಬಚಾವೋ ಸಂಗ್ರಾಮ್' ಪಾದಯಾತ್ರೆಯನ್ನ ಮಾಡಿ ಕೇಂದ್ರದ ಬಿಜೆಪಿಯ ನಡೆಯನ್ನ ದಾರಿಯುದ್ದಕ್ಕೂ ಖಂಡಿಸಿದರು. ಇನ್ನುಳಿದಂತೆ ಹರೀಶ್ ಕುಮಾರ್ ಅವರ ಜೊತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಾಥ್ ನೀಡಿ ಪಾದಯಾತ್ರೆಯನ್ನ ಯಶಸ್ವಿಗೊಳಿಸಿದರು. ಪ್ರತೀ ತಾಲೂಕುಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ಬರುವ ವೇಳೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿತ್ತು. ಅದರಂತೆ ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರ ಜೊತೆ ಸುಳ್ಯದಿಂದ ಮೂಲ್ಕಿವರೆಗೂ ಹೆಜ್ಜೆ ಹಾಕಿದರು.
.jpeg)
.jpeg)
