
PUTTUR: ಪುತ್ತೂರಿನ ಸಂತೆಯಲ್ಲಿ ಭಾರೀ ಕಡಿಮೆ ಬೆಲೆಗೆ ತಾಜಾ ತರಕಾರಿಗಳು!!
ಪುತ್ತೂರು: ಪುತ್ತೂರಿನ ಸಂತೆ ಅಂದ್ರೇನೆ ಹಾಗೇ...ಹತ್ತೂರಿನ ಜನ ಬಂದು ಮುಗಿ ಬೀಳುವುದುಂಟು.. ಇಂದು ಕೂಡಾ ಹಾಗೆನೇ ಪುತ್ತೂರಿನ ಸಂತೆಗೆ ಜನಸಾಗರವೇ ಹರಿದು ಬರುತ್ತಿದೆ. ಏನಪ್ಪ ಯಾವಾಗ್ಲೂ ಇಷ್ಟೊಂದು ಜನ ಬರಲ್ವಲ್ಲ, ಇವತ್ತೇನು ಸ್ಪೆಷಲ್ ಅಂತಾ ಜನ ಮಾತಾಡ್ತಾ ಇದ್ದಾರೆ. ಹೌದು ವಿಶೇಷ ಇದೆ.
ಪುತ್ತೂರಿನ ಸಂತೆಯಲ್ಲಿ ಇಂದು ಭಾರೀ ಕಡಿಮೆ ಬೆಲೆಗೆ ಹಣ್ಣು, ತರಕಾರಿಗಳು ಮಾರಾಟವಾಗುತ್ತಿದೆ. 3 ಕೆ.ಜಿ. ಟೊಮೆಟೋಗೆ 50 ರೂಪಾಯಿ, 3 ಕೆ.ಜಿ. ಸೌತೆಕಾಯಿಗೆ 50 ರೂಪಾಯಿ, 2 ಕೆ.ಜಿ. ಬಟಾಟೆಗೆ 50 ರೂಪಾಯಿ, 2 ಕೆ.ಜಿ. ಈರುಳ್ಳಿಗೆ 50 ರೂಪಾಯಿ, ಕಾಯಿ ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹೀಗೆ ಎಲ್ಲಾ ವಿಧದ ತರಕಾರಿ, ಸೊಪ್ಪುಗಳು ಭಾರೀ ಕಡಿಮೆ ಬೆಲೆ ಸಿಗುತ್ತಿವೆ.
ಈ ಸೀಸನ್ ನಲ್ಲಿ ತರಕಾರಿ ಬೆಲೆಗಳು ಗಗನಕ್ಕೇರುವ ಸಮಯ. ಆದ್ರೆ ಇವತ್ತಿನ ಪುತ್ತೂರಿನ ಸಂತೆಯಲ್ಲಿ ತರಕಾರಿ ಬೆಲೆಗಳು ತೀರಾ ಕಡಿಮೆ ಆಗಿರುವುದು ಜನರಿಗೂ ಖುಷಿ ನೀಡಿದೆ. ಬನ್ನಿ ಇವತ್ತಿನ ಸಂತೆ ಮುಗಿಯುವ ಮುನ್ನ ತಾಜಾ ತರಕಾರಿಗಳನ್ನ ಕಡಿಮೆ ಬೆಲೆಗೆ ಮನೆಗೆ ಕೊಂಡೊಯ್ಯಿರಿ.