
POLITICAL: ಪುತ್ತೂರಿನಲ್ಲಿ ಮುಸ್ಲಿಂ ಸಮುದಾಯ ಆಕ್ರೋಶ!!
ಪುತ್ತೂರು: ಕಾಂಗ್ರೆಸ್ ಮತಕ್ಕಾಗಿ ನಾವು ಬೇಕು, ಆದ್ರೆ ಅವಕಾಶಗಳನ್ನು ಹಂಚುವಾಗ ನಾವು ಬೇಡ.. ಈ ಧೋರಣೆ ಯಾಕೆ? ಎಂಬುದು ಪ್ರಸ್ತುತ ಪುತ್ತೂರು ವಿಧಾನಸಭಾ ವ್ಯಾಪ್ತಿಯ ಮುಸ್ಲಿಮ್ ಸಮುದಾಯದ ಆಕ್ರೋಶ. ಹೌದು ಬಂಟ ಸಮುದಾಯದ ಶಾಸಕರು ಇರುವಾಗಲೇ, ಬಂಟ ಸಮುದಾಯದವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಜವಾಬ್ದಾರಿಯುತ ಹುದ್ದೆಯಾದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಜವಾಬ್ದಾರಿಯನ್ನು ಕೂಡ ಅದೇ ಸಮುದಾಯಕ್ಕೆ ನೀಡಲಾಗಿದೆ. ಕಾಂಗ್ರೆಸ್ ಗೆ ಬೆರಳೆಣಿಕೆಯ ಮತಗಳಿರುವ ಬ್ರಾಹ್ಮಣ ಸಮುದಾಯಕ್ಕೂ ಇದೀಗ ಪೂಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸ್ಥಾನವನ್ನೂ ಬ್ರಾಹ್ಮಣ ಸಮುದಾಯಕ್ಕೆ ನೀಡಲಾಗಿದೆ. ಆದರೆ ಪುತ್ತೂರಿನಲ್ಲಿ ಶೇ.99ರಷ್ಟು ಕಾಂಗ್ರೆಸ್ ಗೆ ಮತ ಚಲಾಯಿಸಿದ ಮುಸ್ಲಿಂ ಸಮುದಾಯಕ್ಕೆ ಚಿಲ್ಲರೆ ಪಿಲ್ಲರೆ ಸಮಿತಿಗಳಲ್ಲಿ ಸದಸ್ಯತ್ವ ಬಿಟ್ಟರೆ ಜವಾಬ್ದಾರಿಯುತ ಒಂದೇ ಒಂದು ಸ್ಥಾನ ಮಾನ ಇಲ್ಲ. ಇದು ಈಗಿನ ಪುತ್ತೂರಿನ ಕಾಂಗ್ರೆಸ್ ನೀತಿ.
ಆಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ!!
ಸಂಪ್ಯ ಮಂಡಲ ಪ್ರಧಾನರಾಗಿ ಪುತ್ತೂರು ನಗರಸಭೆಯಲ್ಲಿ ಐದು ಬಾರಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಆರ್ಯಾಪು ಸಿಎ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಮಹಮ್ಮದ್ ಆಲಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯುತ ಹುದ್ದೆ ಇಲ್ಲ. ಈ ಹಿಂದಿನಿಂದಲೂ ಅವರಿಗೆ ಅವಕಾಶಗಳನ್ನು ನೀಡಲಾಗಿಲ್ಲ. ಈ ಬಾರಿಯ ಪೂಡಾ ಅಧ್ಯಕ್ಷ ಸ್ಥಾನವಾದರೂ ಸಿಗಬಹುದೆಂಬ ನಿರೀಕ್ಷೆ ಇತ್ತು. ಅದೂ ಕೂಡ ಠುಸ್ ಆಗಿದೆ. ಮಹಮ್ಮದ್ ಆಲಿ ಬರೀ ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೀಮಿತಿಗೊಳಿಸಲಾಗಿದ್ದು, ಪಕ್ಷದಲ್ಲಿ ಅವರ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿದೆ.