
PROTEST: ಪೊಲೀಸರ ವಿರುದ್ಧ ಕೆರಳಿ ಕೆಂಡವಾದ ಪುತ್ತೂರಿನ ಮಾಜಿ ಶಾಸಕ!!
Tuesday, March 25, 2025
ಪುತ್ತೂರು: ಕೇವಲ ಓಲೈಕೆ ರಾಜಕಾರಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲಿಸಿ ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ನಾವು ಸಿದ್ಧ ಎಂದಿರುವ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನ ಖಂಡಿಸಿ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಡಿಕೆಶಿ ಪ್ರತಿಕೃತಿಯನ್ನ ದಹಿಸಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್ ಕೈ ಹಂತಕ್ಕೆ ತಲುಪಿತ್ತು. ಇದರ ನಡುವೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪೊಲೀಸರ ವಿರುದ್ಧ ಕೆರಳಿ ಕೆಂಡವಾದ್ರು. ಪೊಲೀಸದರಿಂದ ರಾಜಕಾರಣ ಕಲಿಯುವ ಅಗತ್ಯವಿಲ್ಲ ಎಂದು ಪೊಲೀಸರ ಮೇಲೆಯೇ ಹರಿಹಾಯ್ದರು. ಬಳಿಕ ಪೊಲೀಸರ ಮನವಿಯನ್ನ ತಿರಸ್ಕರಿಸಿ ಡಿಕೆಶಿ ಪ್ರತಿಕೃತಿಯನ್ನ ದಹಿಸಿದರು.