-->
CASE: ಮಾಣಿಲದಲ್ಲಿ `ಮಹೇಶ'ನ ಕಿತಾಪತಿ!!

CASE: ಮಾಣಿಲದಲ್ಲಿ `ಮಹೇಶ'ನ ಕಿತಾಪತಿ!!


ವಿಟ್ಲ: ಬಿಜೆಪಿಯಲ್ಲಿ ರಾಜಕೀಯವಾಗಿ ಗುರುತಿಸಿಕೊಂಡು, ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರ್ದೇಶಕನಾಗಿರುವ ಮಹೇಶ್ ಭಟ್ ಎಂಬವರ ಮೇಲೆ ದಲಿತ ದೌರ್ಜನ್ಯ, ಅಪ್ರಾಪ್ತೆ ಜೊತೆ ಅಸಭ್ಯ ವರ್ತನೆ ಹಾಗೂ ಪೋಕ್ಸೋ ಪ್ರಕರಣ ದಾಖಲಾಗಿದೆ. 

16 ವರ್ಷದ ಬಾಲಕಿಯ ಜೊತೆ ಅನುಚಿತ ವರ್ತನೆ, ಕೀಳು ಮಟ್ಟದ ಶಬ್ದಗಳನ್ನು ಬಳಸಿದ್ದಾರೆಂಬ ಆರೋಪದಲ್ಲಿ ಲಾಕ್ ಆಗಿರುವ ಮಹೇಶ್ ಭಟ್ ವಿಟ್ಲದ ಪೆರುವಾಯಿ ಮಾಣಿಲದಲ್ಲಿ ಅತ್ಯಂತ ಪ್ರಭಾವಿ. ಬಾಲಕಿಯ ಪೋಷಕರು ಕೂಲಿ ಕೆಲಸ ಮಾಡಿಕೊಂಡಿದ್ದು, ಎರಡು ತಿಂಗಳು ಬಾಲಕಿ ಶಾಲೆಗೆ ಹೋಗಿಲ್ಲ ಯಾಕೆ ಎಂದು ಆಕೆಯ ವರ್ತನೆಯಿಂದ ಆತಂಕಗೊಂಡಿದ್ದರು. ಶಾಲೆಯಿಂದ ಶಿಕ್ಷಕರು ವಿಚಾರಿಸುವ ನಿಟ್ಟಿನಲ್ಲಿ ಮನೆಗೆ ಬಂದಿದ್ದಾಗ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಆದ್ರೆ ಬಾಲಕಿಯ ಭೇಟಿಗೆ ಅವಕಾಶ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಾಣಿಲ ಪರಿಸರದಲ್ಲಿ ಮಹೇಶ್ ಭಟ್ ನ ಪುರಾಣ ಹಬ್ಬಿದೆ. ಅದಾಗಲೇ ಬಿಳಿಕ ಮಹೇಶ್ ಭಟ್ ತಲೆಮರೆಸಿಕೊಂಡಿರುವುದು ಮಾಹಿತಿ ಲಭಿಸಿದೆ. 

ಘಟನೆಯ ಬಗ್ಗೆ ಸಮಗ್ರವಾದ ತನಿಖೆ ಆಗಬೇಕೆಂದು ಅಲ್ಲಿನ ಪ್ರಮುಖರ ಮಾತುಗಳಿಂದ ಕೇಳಲಾರಂಭಿಸಿದೆ. ಇನ್ನು ಮಹೇಶ್ ಭಟ್ ಗೆ ಬೆಂಬಲವಾಗಿ ನಿಂತ ಕೆಲ ರಾಜಕೀಯ ಪ್ರಮುಖರಿಗೆ ಇದೀಗ ನಡುಕ ಹುಟ್ಟಿದೆ. ಮಹೇಶ್ ಭಟ್ ಕಿತಾಪತಿಗೆ ಮೊದಲಿಗೆ ಬೆಂಬಲವಾಗಿದ್ದ ಕೆಲ ಪ್ರಮುಖರು ಇದೀಗ ಕೇಸ್ ದಾಖಲಾಗುತ್ತಿದ್ದಂತೆ ಆತನ ಸಹವಾಸದಿಂದ ಜಾರಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article