.jpg)
MANGALURU: ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟದ್ದಕ್ಕೆ ವಿದ್ಯಾರ್ಥಿಗೆ ಹಲ್ಲೆ!!
Thursday, March 20, 2025
ಮಂಗಳೂರು: ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕದ್ರಿಯಲ್ಲಿರುವ ಬಾಯ್ಸ್ ಪಿಜಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ವಿಕಾಸ್ (18) ಹಲ್ಲೆಗೊಳಗಾದ ವಿದ್ಯಾರ್ಥಿ. ಮಾರ್ಚ್ 17ರಂದು ರಾತ್ರಿ ಸುಮಾರು 10:30ಕ್ಕೆ ಈ ಘಟನೆ ನಡೆದಿದೆ. ಮಂಗಳೂರಿನ ಕದ್ರಿಯಲ್ಲಿರುವ ಪಿಜಿಯಲ್ಲಿ ಕಳೆದ ಆರು ತಿಂಗಳಿನಿಂದ ವಾಸ್ತವ್ಯ ಹೊಂದಿದ್ದ ವಿಕಾಸ್, ಊಟದಲ್ಲಿ ಹುಳ, ಗಲೀಜು, ಕೆಟ್ಟ ಶೌಚಾಲಯ ಅಂತ ಆರೋಪ ಮಾಡಿದ್ದ.
ಈ ಬಗ್ಗೆ ಪಿಜಿಯ ವಿಮರ್ಶೆ ಕುರಿತು ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟಿದ್ದ ವಿಕಾಸ್. ಕಾಮೆಂಟ್ ನೋಡಿ ಪಿಜಿಯ ಮಾಲೀಕ ಸಂತೋಷ್ ಕೆಂಡಮಂಡಲನಾಗಿದ್ದ. ಬಳಿಕ ವಿಕಾಸ್ ಗೆ ಧಮ್ಕಿ ಹಾಕಿ ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದಾನೆ. ಡಿಲೀಟ್ ಮಾಡದೇ ಇದ್ದಾಗ ವಿಕಾಸ್ ಮೇಲೆ ಐವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿ ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.