ACCIDENT: ರಸ್ತೆ ಬದಿಯ ಮೋರಿಗೆ ಗುದ್ದಿದ ಬೈಕ್: ವಿದ್ಯಾರ್ಥಿ ಸಾವು
Friday, January 17, 2025
ಕಡಬ: ಬೈಕೊಂದು ರಸ್ತೆ ಬದಿಯ ಮೋರಿಗೆ ಗುದ್ದಿ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬದ ಪೇರಡ್ಕ ಎಂಬಲ್ಲಿ ಇಂದು ನಡೆದಿದೆ. ಕಲ್ಲುಗುಡ್ಡೆ ವಿಶ್ವನಾಥ ಎಂಬವರ ಏಕೈಕ ಪುತ್ರ ಆಶೀಶ್(16) ಮೃತಪಟ್ಟ ವಿದ್ಯಾರ್ಥಿ.
ಆಶೀಶ್ ಪೇರಡ್ಕ ಸಾಂತೋಮ್ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಆಶೀಶ್ ನನ್ನ ತಂದೆ ವಿಶ್ವನಾಥ ಅವರು ಇಂದು ಎಂದಿನಂತೆ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬೈಕ್ ಗುದ್ದಿದೆ. ಈ ವೇಳೆ ಸಹ ಸವಾರನಾಗಿದ್ದ ಆಶೀಶ್ ಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
