
PUTTUR: ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಅಡುಗೆ ಸಹಾಯಕ ಹೊನ್ನಪ್ಪ ಸಿ.ಎಚ್. ನಿವೃತ್ತಿ...
Tuesday, December 3, 2024
ಪುತ್ತೂರು: ಕಳೆದ 28 ವರ್ಷಗಳಿಂದ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕರಾಗಿ ಇದೀಗ ಸೇವಾ ನಿವೃತ್ತಿ ಪಡೆದ ಹೊನ್ನಪ್ಪ ಸಿ.ಎಚ್ ಅವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಎಲ್ಲಾ ಸಿಬಂದಿಗಳ ಜತೆಗೆ ಅತ್ಯಂತ ಪ್ರೀತಿಯ ಒಡನಾಟ ಇಟ್ಟುಕೊಂಡು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವಾ ಅವಧಿಯನ್ನು ಪೂರೈಸಿದ ಅವರಿಗೆ ಕಾರ್ಯಕ್ರಮದಲ್ಲಿ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ, ಸಹಾಯಕ ಆಡಳಿತಾಧಿಕಾರಿ ಯೋಗಾನಂದ್, ಡಾ.ಪ್ರಶಾಂತ್, ಡಾ.ಜಯ ಕುಮಾರಿ, ಡಾ.ಯದುರಾಜ್, ಡಾ.ಜೈನಾಬಿ ಹಾಗೂ ಸಿಬಂದಿಗಳು ಭಾಗವಹಿಸಿದ್ದರು. ಚಿಕ್ಕಪುತ್ತೂರಿನ ಬಾಬು ಹಾಗೂ ಚೆನ್ನು ಅವರ ಪುತ್ರರಾದ ಹೊನ್ನಪ್ಪ ಸಿ.ಎಚ್ ನ.30ಕ್ಕೆ ಸೇವೆಯಿಂದ ನಿವೃತ್ತರಾಗಿದ್ದರು.