-->
PUTTUR: ಶಾಸಕ ಅಶೋಕ್ ರೈಗೆ ಸವಾಲೆಸೆದ ಹಕೀಂ ಕೂರ್ನಡ್ಕ!!

PUTTUR: ಶಾಸಕ ಅಶೋಕ್ ರೈಗೆ ಸವಾಲೆಸೆದ ಹಕೀಂ ಕೂರ್ನಡ್ಕ!!


ಪುತ್ತೂರು:
ಶಾಸಕ ಅಶೋಕ್ ರೈಗೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಸವಾಲೆಸೆದಿದ್ದಾರೆ. ಮುಂದಿನ ಚುನಾವಣೆಗೆ ಅಶೋಕ್ ರೈಗಳು ಬಿಜೆಪಿಗೆ ಸೇರುವುದು ಖಚಿತ.  ಅಶೋಕ್ ರೈ ಅವರು ಕಾಂಗ್ರೆಸ್ ಪಕ್ಷದಲ್ಲೇ ಇರ್ತಿನಿ ಅಂತ ಹೇಳಲಿ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಅಂತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಆಣೆಪ್ರಮಾಣ ಮಾಡಿ ಹೇಳಬೇಕು. ನಾನು ಶಾಸಕ ಅಶೋಕ್ ರೈ ಅವರಿಂದ ಒಂದು ರೂಪಾಯಿಯನ್ನು ಇಲ್ಲೀವರೆಗೂ ಪಡೆದಿಲ್ಲ. ಪುತ್ತೂರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಹಗಲಿರುಲು ದುಡಿದಿದ್ದೇನೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. 

ಇತ್ತೀಚೆಗೆ ಶಾಸಕ ಅಶೋಕ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಸಾಮಾಜಿಕ ಜಾಲತಾಣದಲ್ಲಿ ಒಂದು ಆಡಿಯೋ ಹರಿಯಬಿಟ್ಟಿದ್ದರು. ಶಾಸಕರ ಕಾರ್ಯವೈಖರಿ ಬಗ್ಗೆ ಅಪಸ್ವರವೆತ್ತಿದ್ದರು. ಇದಾದ ಬಳಿಕ ಹಕೀಂ ಕೂರ್ನಡ್ಕಗೆ ಈಶ್ವರಮಂಗಳ ಮೂಲದ ಅಶೋಕ್ ರೈ ಬೆಂಬಲಿಗನೋರ್ವ ಜೀವ ಬೆದರಿಕೆಯೊಡ್ಡಿದ್ದು, ಕಾಂಗ್ರೆಸ್ ಕಾರ್ಯಕರ್ತರೊಳಗೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. 

Ads on article

Advertise in articles 1

advertising articles 2

Advertise under the article