ಮಂಗಳೂರು: ಆರ್‌ಪಿಸಿ ವಂಚನೆ ಜಾಲಕ್ಕೆ ಸಿಲುಕಿ ಬಲಿಯಾದನೇ ಯುವಕ!
Friday, December 27, 2024
ಮಂಗಳೂರು: ಆರ್‌ಪಿಸಿ ಹೆಸರಿನ ಅನಧಿಕೃತ ಆ್ಯಪ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ದುರಾದೃಷ್ಟಕರ ಘಟನೆ ನಗರದ ಹೊರವಲಯದ ಮರವೂರಿನಲ್ಲಿ ನಡೆದಿದೆ. ಈತ ಆರ್‌ಪಿಸಿಯನ್ನು ನಂಬಿ ಸುಮಾರು 70 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದನು ಎನ್ನಲಾಗಿದೆ. ಕಂಪೆನಿ 3 ದಿನಗಳ ಹಿಂದೆ ಬಾಗಿಲು ಮುಚ್ಚಿಕೊಂಡಿದ್ದು, ಸೂಕ್ತ ಸ್ಪಂದನೆಗೂ ಯಾರೂ ಸಿಕ್ಕಿರಲಿಲ್ಲ. ತಾನು ಮೋಸ ಹೋದನೆಂದು ಅರಿತ ಮೂಡುಶೆಡ್ಡೆಯ ಯುವಕ ಸೂರ್ಯ (24) ಅದೇ ದಿನ ನಾಪತ್ತೆಯಾಗಿದ್ದ ಎನ್ನಲಾಗಿದೆ. ಇದೀಗ ಆತ ಆತ್ಮಹತ್ಯೆ ಮಾಡಿದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.