-->
ಮಂಗಳೂರು: ಹರೇಕಳ ಬಿಜೆಪಿ ಬೂತ್‌ ಅಧ್ಯಕ್ಷನ ಮೇಲೆ ಹಲ್ಲೆ; ಎಂಎಲ್‌ಸಿ ಕಿಶೋರ್‌ ಕುಮಾರ್‌ ತೀವ್ರ ಖಂಡನೆ

ಮಂಗಳೂರು: ಹರೇಕಳ ಬಿಜೆಪಿ ಬೂತ್‌ ಅಧ್ಯಕ್ಷನ ಮೇಲೆ ಹಲ್ಲೆ; ಎಂಎಲ್‌ಸಿ ಕಿಶೋರ್‌ ಕುಮಾರ್‌ ತೀವ್ರ ಖಂಡನೆ

 


ಮಂಗಳೂರು: ಭಾರತೀಯ ಜನತಾ ಪಕ್ಷದ ಹರೇಕಳ ಬೂತ್‌ ಅಧ್ಯಕ್ಷ ಶರತ್‌ ಕುಮಾರ್‌ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಶರತ್‌ ಕುಮಾರ್‌ ಭೇಟಿಯಾಗಿ ಧೈರ್ಯ ತುಂಬಿದ ಕಿಶೋರ್‌ ಕುಮಾರ್‌, ಮತಾಂಧ ಗುಂಪು ನಡೆಸಿರುವ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗೃಹ ಇಲಾಖೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.

ಸುಮಾರು 15-20 ಜನರಿದ್ದ ಗುಂಪೊಂದು ಶುಕ್ರವಾರ ಮಸೀದಿಯಿಂದ ನೇರವಾಗಿ ಶರತ್‌ ಕುಮಾರ್‌ ಗಟ್ಟಿ ಅವರ ಮನೆಗೆ ನುಗ್ಗಿ ಕ್ಷುಲ್ಲಕ ಕಾರಣ ಮುಂದಿಟ್ಟು ಹಲ್ಲೆ ನಡೆಸಿದೆ. ಈ ವೇಳೆ ತಡೆಯಲು ಬಂದ ಶರತ್‌ ಕುಮಾರ್‌ ಅವರ ಅಜ್ಜಿಯನ್ನು ದೂಡಿ ದಬ್ಬಾಳಿಕೆ ನಡೆಸಿದ್ದಾರೆ. ಹರೇಕಳ, ಪಾವೂರು ವ್ಯಾಪ್ತಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಿರುವುದು ನಿಜ. ಹಾಗಂತ ಯಾವುದೇ ದಬ್ಬಾಳಿಕೆಗೆ ಹಿಂದೂ ಸಮಾಜ ಸುಮ್ಮನಿರದು. ಹಿಂದೂಗಳು ಪ್ರತ್ಯುತ್ತರ ನೀಡಲು ಮುಂದಾದರೆ ಅಲ್ಪಸಂಖ್ಯಾತ ಸಮಾಜ ಊರನ್ನ ಬಿಟ್ಟು ಓಡಬೇಕಾದೀತು ಎಂದು ಕಿಶೋರ್‌ ಕುಮಾರ್‌ ಎಚ್ಚರಿಸಿದ್ದಾರೆ.


ಶರತ್‌ ಕುಮಾರ್‌ ಮೇಲೆಯೇ ಕೇಸು ದಾಖಲಿಸುವ ಹುನ್ನಾರವೂ ನಡೆಯುತ್ತಿದೆ. ಗೃಹ ಸಚಿವರು ಈ ಕುರಿತು ತಕ್ಷಣವೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಸಮಾಜಕ್ಕೆ ಶಾಂತಿಗೆ ಶಾಂತಿ, ಕ್ರಾಂತಿಗೆ ಕ್ರಾಂತಿ ಮಾಡಿ ಗೊತ್ತಿದೆ. ರಾಜ್ಯ ಕಾಂಗ್ರೆಸ್‌ ಸರಕಾರ ಹಿಂದೂಗಳ ಮೇಲಿನ ದಬ್ಬಾಳಿಕೆ ತಡೆಯದೇ ಹೋದರೆ, ಹಿಂದೂ ಸಮಾಜ ಯಾವುದೇ ಹೋರಾಟಕ್ಕೂ ಸಿದ್ಧವಾಗಿದೆ. ಹರೇಕಳ ಭಾಗದಲ್ಲಿ ಅಲ್ಪಸಂಖ್ಯಾತರಾದ ಕಾರಣಕ್ಕೆ ಹಿಂದೂ ಸಮಾಜ ಸುಮ್ಮನಿರದು. ಕೋಮುಗಲಭೆ ಷಡ್ಯಂತ್ರವನ್ನ ಸರಕಾರ ನಿಯಂತ್ರಿಸಬೇಕು. ಇಡೀ ಹಿಂದೂ ಸಮಾಜ ಹರೇಕಳ, ಪಾವೂರು ಹಿಂದೂಗಳ ಜೊತೆಗಿರಲಿದೆ. ಶಾಂತಿಯುತ ಸಮಾಜ ಬೇಕಿದ್ದರೆ ಹಿಂದೂಗಳು ಅಷ್ಟೇ ಶಾಂತಿಯುತರಾಗಿ ಬದುಕುತ್ತಾರೆ. ಅಶಾಂತಿ ಸೃಷ್ಟಿಸಿ ಕೋಮುಗಲಭೆ ಹುನ್ನಾರ ಮಾಡಿದ್ದಲ್ಲಿ ಅದನ್ನ ಹತ್ತಿಕ್ಕುವುದು ಹಿಂದೂ ಸಮಾಜಕ್ಕೆ ಗೊತ್ತಿದೆ. ಇದು ಮುಸಲ್ಮಾನ ಸಮುದಾಯಕ್ಕೆ ನಮ್ಮ ಎಚ್ಚರಿಕೆ ಎಂದು ಕಿಶೋರ್‌ ಕುಮಾರ್‌ ಪುತ್ತೂರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article