-->
ಮಂಗಳೂರು: 70ರ ವೃದ್ಧನಿಂದ ಕಂದಮ್ಮಳ ಮೇಲೆ ಲೈಂ*ಗಿಕ ದೌ*ರ್ಜನ್ಯ! ಪೋಕ್ಸೋ ಪ್ರಕರಣದಡಿ ಆರೋಪಿ ಅಂದರ್!

ಮಂಗಳೂರು: 70ರ ವೃದ್ಧನಿಂದ ಕಂದಮ್ಮಳ ಮೇಲೆ ಲೈಂ*ಗಿಕ ದೌ*ರ್ಜನ್ಯ! ಪೋಕ್ಸೋ ಪ್ರಕರಣದಡಿ ಆರೋಪಿ ಅಂದರ್!

ಮಂಗಳೂರು: 70 ಹರೆಯದ ವೃದ್ಧನೋರ್ವ 3 ವರ್ಷದ ಕಂದಮ್ಮನಿಗೆ ಲೈಂ*ಗಿಕ ದೌ*ರ್ಜನ್ಯ ನಡೆಸಿರುವ ಘಟನೆ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ನಡೆದಿದೆ. ವೃದ್ಧ ನಡೆಸಿದ ದೌರ್ಜನ್ಯದಿಂದ ಮಗು ಅಸ್ವಸ್ಥಗೊಂಡಿತ್ತು. ಈ ವೇಳೆ ಅಡಿಕೆ ಅಂಗಡಿ ನಡೆಸುತ್ತಿದ್ದ ಅಬ್ದುಲ್ಲ (70) ಎಂಬಾತ ದೌ*ರ್ಜನ್ಯ ನಡೆಸಿರುವುದಾಗಿ ಗೊತ್ತಾಗಿದೆ. ನೊಂದ ಬಾಲಕಿಯ ತಾಯಿ ನೀಡಿದ ದೂರಿನಂತೆ‌ ಆರೋಪಿ ಅಬ್ದುಲ್ಲಾನನ್ನು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ, ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article