.jpg)
POLITICS: ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಸಿದ್ದವಾಗ್ತಿದೆಯಾ ಪುತ್ತೂರು??
ಪುತ್ತೂರು: ಪುತ್ತೂರಿನ ರಾಜಕೀಯ ಪಡಸಾಲೆಯಲ್ಲಿ ಎಷ್ಟೋ ಉಲ್ಟಾ ಪಲ್ಟಾ ಆಗಿರೋ ಉದಾಹರಣೆಗಳು ಇವೆ. ಪುತ್ತೂರಿನಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಸರ್ಕಾರ ನಡೆಸುತ್ತೇ ಅನ್ನೋದು ಇನ್ನೊಂದು ಸತ್ಯ. ಹೀಗಿರುವಾಗ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಸಿದ್ಧವಾಗ್ತಿದೆಯಾ ಪುತ್ತೂರು ಎಂಬ ಆಲೋಚನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಹೌದು ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಯೋಗವಾಗುತ್ತಾ ಸೇಡಿನ ಅಸ್ತ್ರ ಎಂಬ ಅನುಮಾನ ಮೂಡತೊಡಗಿದೆ. ಯಾಕಂದ್ರೆ ಇತ್ತೀಚೆಗಷ್ಟೇ ಅರುಣ್ ಕುಮಾರ್ ಅವ್ರು ಬಿಜೆಪಿಗೆ ಸೇರಿಕೊಂಡ ಬಳಿಕ ಪುತ್ತೂರಿನ ಬಿಜೆಪಿ ಪಕ್ಷದೊಳಗಿನ ಬೇಗುದಿ ತಣ್ಣಗಾಯ್ತು ಅನ್ನೋಗುವಷ್ಟರ ಹೊತ್ತಿಗೆ, ಮತ್ತೆ ವಿಎಚ್ ಪಿ ಕಾರ್ಯಕ್ರಮದಲ್ಲಾದ ಘಟನೆ ಬಳಿಕ ಅದು ಉಲ್ಬಣಗೊಂಡಂತೆ ಕಾಣ್ತಾ ಇದೆ. ಹೌದು ಸದ್ಯ ಈಗಿರುವ ಮಾಹಿತಿ ಪ್ರಕಾರ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈಗೆ ಬಿಜೆಪಿ ಗಾಳ ಹಾಕ್ತಾ ಇದೆ ಎಂಬ ವಿಚಾರ ತೆರೆಮರೆಯಲ್ಲಿ ನಡೀತಾ ಇದೆ. ಅರುಣ್ ಕುಮಾರ್ ಪುತ್ತಿಲ ಬದಲು ಅಶೋಕ್ ಕುಮಾರ್ ರೈ ಅವರನ್ನೇ ಮುಂದಿನ ಬಾರಿಗೆ ಬಿಜೆಪಿಯ ಅಭ್ಯರ್ಥಿಯನ್ನಾಗಿ ಇಳಿಸುವಂತೆ ಒಂದು ಪ್ಲ್ಯಾನ್ ಪುತ್ತೂರಿನ ಬಿಜೆಪಿ ವಲಯದಲ್ಲಿದೆ.
ಇತ್ತೀಚೆಗೆ ವಿಎಚ್ ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕಾಣಿಸಕೊಂಡ ಬೆನ್ನಲ್ಲೇ ಈ ಒಂದು ಚರ್ಚೆ ಮತ್ತಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈಗೆ ಈ ಹಿಂದೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಪುತ್ತೂರಿನಲ್ಲಿ ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಸೇರಿದ್ರೂ ಕೂಡ ಸಂಘ ಪರಿವಾರದ ಜೊತೆ ಉತ್ತಮವಾದ ಒಡನಾಟವನ್ನ ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ವಿಎಚ್ ಪಿ ಕಾರ್ಯಕ್ರಮಕ್ಕೂ ಅಶೋಕ್ ಕುಮಾರ್ ರೈ ಅವರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ವಿಎಚ್ ಪಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ರು.
ಸದ್ಯ ಸಂಘ ಪರಿವಾರದ ವಲಯದಲ್ಲಿ ಮತ್ತೆ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮುನಿಸು ಮುಂದುವರಿತಾ ಇದೆ. ಅರುಣ್ ಕುಮಾರ್ ಪುತ್ತಿಲ ಅಂದಾಕ್ಷಣ ಕೆಲವರು ನಿಗಿ ನಿಗಿ ಕೆಂಡದಂತೆ ಉರಿಯುತ್ತಾರೆ. ಒಳಗೊಳಗೆಯೇ ಸಾಕಷ್ಟು ಮಸಲತ್ತುಗಳು ನಡೀತಾ ಇವೆ. ಸಾಕಷ್ಟು ಬಾರಿ ಅರುಣ್ ಕುಮಾರ್ ಪುತ್ತಿಲ ನೇರಾ ನೇರಾ ಮಾತನಾಡಿದ್ದು ಅಥವಾ ಅವರದ್ದೇ ಒಂದು ಬೇರೆಂಯೇ ಗುಂಪೊಂದನ್ನ ರಚಿಸಿ ಕಾಣಿಸಿಕೊಳ್ಳೋದು ನಾಯಕರಿಗೆ ಇರಿಸು ಮುರಿಸು ಆಗಿರೋದು ಇದೆ. ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕೆಂಬುದು ಕೂಡ ಬಿಜೆಪಿ ನಾಯಕರಲ್ಲಿದೆ. ಅರುಣ್ ಪುತ್ತಿಲ ವರ್ಚಸ್ಸು ಹೆಚ್ಚಾಗಬಾರದು. ಇದಕ್ಕೆ ಕೂಡಲೇ ಬ್ರೇಕ್ ಹಾಕಬೇಕು ಎಂಬುದು ಬಿಜೆಪಿಯ ನಾಯಕರಲ್ಲಿದೆ. ಆ ಕಾರಣಕ್ಕಾಗಿಯೇ ಅರುಣ್ ಕುಮಾರ್ ಪುತ್ತಿಲ ಸ್ಥಾನಕ್ಕೆ ಬೇರೊಬ್ಬರನ್ನ ತಂದು ಕೂರಿಸಿದ್ರೆ ಹೇಗೆ? ಇದಕ್ಕೆ ಅಶೋಕ್ ಕುಮಾರ್ ರೈ ಸೂಕ್ತ ಅಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಪುತ್ತೂರು ಬಿಜೆಪಿ ವಲಯದಲ್ಲಿ ಸದ್ಯ ಚರ್ಚೆಯಲ್ಲಿರುವಂತ ವಿಚಾರ.
ಸದ್ಯ ಅಶೋಕ್ ಕುಮಾರ್ ರೈ ಕಾಂಗ್ರೆಸ್ಸಿನಲ್ಲಿದ್ದರೂ ಕೂಡ ಸಂಘ ಪರಿವಾರದವರ ಜೊತೆ ಒಂದು ಉತ್ತಮವಾದ ಒಡನಾಟ ಇರುವುದಂತೂ ಸತ್ಯ. ಕಾಂಗ್ರೆಸ್ಸಿನಿಂದ ಗೆದ್ದು ಶಾಸಕನಾಗಿದ್ರೂ ಕೂಡ ಅನೇಕ ಹಿಂದೂ ಧರ್ಮದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಹೀಗಿರುವಾಗ ಬಂಡಾಯದ ಬೇಗುದಿಯಲ್ಲೇ ಇರುವ ಅರುಣ್ ಕುಮಾರ್ ಪುತ್ತಿಲಗೆ ಸೂಕ್ತವಾಗಿ ಟಕ್ಕರ್ ಕೊಡಲು ಅಶೋಕ್ ಕುಮಾರ್ ರೈ ಅವರೇ ಸರಿ ಅನ್ನೋದು ಬಿಜೆಪಿ ವಲಯದಲ್ಲಿ ಸದ್ಯ ಓಡಾಡ್ತಾ ಇರೋ ಪ್ರಶ್ನೆ. ಈ ಬಗ್ಗೆ ಕೆಲವೊಂದು ಮಾತುಕತೆಗಳು ಬಿಜೆಪಿ ವಲಯದಲ್ಲಿ ನಡೀತಾ ಇವೆ ಅನ್ನೋ ಗುಸು ಗುಸು ಪುತ್ತೂರಿನ ರಾಜಕೀಯ ಪಂಡಿತರದ್ದು. ಒಂದು ಮಾಹಿತಿಯ ಪ್ರಕಾರ ಈ ಪ್ಲ್ಯಾನ್ ವರ್ಕ್‍ಔಟ್ ಆಗುತ್ತಾ ಅನ್ನೋ ಲೆಕ್ಕಚಾರದಲ್ಲೂ ಬಿಜೆಪಿ ಇದೆ. ಇದಕ್ಕೆಲ್ಲ ಪುತ್ತೂರಿನ ಕಾಂಗ್ರೆಸ್ ಶಾಸಕರು ಒಪ್ಪಿಕೊಳ್ತಾರ ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.