IND vs NZ | ಕುಸಿದ ಕೆಳಕ್ರಮಾಂಕದ ಬ್ಯಾಟಿಂಗ್ ಬಲ; ಕಿವೀಸ್ ಗೆ 107 ಟಾರ್ಗೆಟ್!
Saturday, October 19, 2024
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನ ಆಘಾತದ ನಡುವೆಯೂ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ, ಪ್ರವಾಸಿ ತಂಡಕ್ಕೆ 107 ರನ್ಗಳ ಗೆಲುವಿನ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿದ್ದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆಗೆ ತಕ್ಕ ಪ್ರತ್ಯುತ್ತರ ನೀಡಿ ಬರೋಬ್ಬರಿ 462 ರನ್ ಕಲೆಹಾಕಿತು. ತಂಡದ ಕೆಳಕ್ರಮಾಂಕ ಸ್ವಲ್ಪ ಸಮಯ ನೆಲಕಚ್ಚಿ ಆಡಿದ್ದರೆ, ಕಿವೀಸ್ಗೆ ಸಿಕ್ಕ ಟಾರ್ಗೆಟ್ ಇನ್ನು ಹೆಚ್ಚಿರುತ್ತಿತ್ತು.
ಆದರೆ ಕನ್ನಡಿಗ ರಾಹುಲ್, ರವೀಂದ್ರ ಜಡೇಜ ಹಾಗೂ ಅಶ್ವಿನ್ ಸರಿಯಾದ ಸಮಯದಲ್ಲಿ ತಂಡಕ್ಕೆ ಕೈಕೊಟ್ಟರು. ಈ ಮೂವರು ಆಟಗಾರರಿಂದ ತಂಡ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಈ ಮೂವರು ಭಾರಿ ನಿರಾಸೆ ಮೂಡಿಸಿದರು.