Hajj | ದಕ್ಷಿಣ ಕನ್ನಡ, ಉಡುಪಿಯ ಹಜ್ ಯಾತ್ರಿಗಳಿಗಾಗಿ ಮಹತ್ವದ ಪ್ರಕಟಣೆ ಇಲ್ಲಿದೆ!
Tuesday, October 15, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳಲಿರುವ ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಜಿಲ್ಲಾ ಮಾಹಿತಿ ಕೇಂದ್ರವನ್ನು ಮುಡಿಪುವಿನ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ಆರಂಭಗೊಂಡಿದೆ. ಈ ಮೂಲಕ ಹಜ್ ಯಾತ್ರಿಕರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವಾಗಲು ರಾಜ್ಯ ಹಜ್ ಸಮಿತಿ ಪ್ರಯತ್ನಿಸಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಗಳ್ ಆದೂರು ಹೇಳಿದ್ದಾರೆ.
ಯಾತ್ರಿಗಳು ಸಲ್ಲಿಸಿದ ದಾಖಲೆ ಪತ್ರಗಳನ್ನು ಮುಡಿಪುವಿನ ಮಾಹಿತಿ ಕೇಂದ್ರಕ್ಕೆ ತಂದುಕೊಟ್ಟರೆ, ಅದನ್ನು ರಾಜ್ಯ ಹಜ್ ಸಮಿತಿಗೆ ತಲುಪಿಸಲಾಗುವುದು. ಆರೋಗ್ಯ ತಪಾಸಣೆ ಹಾಗೂ ತರಬೇತಿಯನ್ನು ಆಯೋಜಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9741770138 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಈ ಬಾರಿ ಎಷ್ಟು ಜನ?
ಈ ಬಾರಿ ರಾಜ್ಯದಿಂದ ಹಜ್ ಯಾತ್ರೆಗೆ 8697 ಮಂದಿ ಆಯ್ಕೆಯಾಗಿದ್ದು, ದ.ಕ ಜಿಲ್ಲೆಯ 1,078, ಉಡುಪಿಯ 116, ಕೊಡಗು ಜಿಲ್ಲೆಯ 101 ಮಂದಿ ಇದ್ದಾರೆ. ಅಷ್ಟೇ ಅಲ್ಲದೇ ದಕ್ಷಿಣ ಕನ್ನಡದಿಂದ 251, ಉಡುಪಿಯ 22 ಹಾಗೂ ಕೊಡಗಿನ 25 ಸೇರಿದಂತೆ ರಾಜ್ಯದ 2,310 ಮಂದಿ ವೇಯಿಟಿಂಗ್ ಲಿಸ್ಟ್‌ನಲ್ಲಿದ್ದಾರೆ.