
PUTTUR: ಸುಳ್ಯದ ಪೆರ್ನಾಜೆ ಮುಗೇರ್ ನಲ್ಲಿ ಕಾಡಾನೆ ಪ್ರತ್ಯಕ್ಷ!!
Wednesday, September 18, 2024
ಸುಳ್ಯ: ಸುಳ್ಯದ ಪೆರ್ನಾಜೆ ಮುಗೇರ್ ನಲ್ಲಿ ಕಾಡಾನೆಯೊಂದು ಮತ್ತೆ ಪ್ರತ್ಯಕ್ಷಗೊಂಡು ಜನರನ್ನ ಭಯಭೀತಿಗೊಳಿಸಿದೆ. ಪೆರ್ನಾಜೆ ಸುತ್ತಮುತ್ತಲಿನ ಕೃಷಿಕರ ಜಮೀನಿನಲ್ಲಿ ಕಾಡಾನೆಯ ಪುಂಡಾಟಕ್ಕೆ ತೆಂಗಿನಮರ, ಅಡಿಕೆಮರ, ಬಾಳೆಗಿಡಗಳನ್ನೆಲ್ಲ ನೆಲಕ್ಕುರುಳಿಸಿದೆ. ಕೆಲ ಕೃಷಿಕರ ಬೆಳೆ ನಾಶವಾಗಿದೆ.
ಇನ್ನು ಇತ್ತೀಚೆಗೆ ಪುತ್ತೂರಿನ ಸವಣೂರು, ಕಠಾರ ಭಾಗದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡು ಜನರನ್ನ ಆತಂಕಗೊಳಿಸಿತ್ತು. ಅಲ್ಲದೇ ಕೃಷಿನಾಶ ಮಾಡಿ ಪುಂಡಾಟ ಮಾಡಿತ್ತು. ಬಳಿಕ ಸುಳ್ಯದ ಮಂಡೆಕೋಲು ಕಾಡಿನ ಮೂಲಕ ಕೇರಳದ ಅಲೆಟ್ಟಿಗೆ ಕಾಡಾನೆಯನ್ನ ಓಡಿಸುವ ಪ್ರಯತ್ನ ಮಾಡಿ ಅರಣ್ಯಾಧಿಕಾರಿಗಳು ಸಫಲರಾಗಿದ್ದರು. ಇದೀಗ ಮತ್ತೆ ಸುಳ್ಯದಲ್ಲಿ ಒಂದು ಕಾಡಾನೆ ಪ್ರತ್ಯಕ್ಷಗೊಂಡು ಜನರನ್ನ ಆತಂಕಕ್ಕೆ ದೂಡಿದೆ.