.jpg)
HSRP: ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆ; ವಾಹನ ಸವಾರರಿಗೆ ಸಿಕ್ತು ರಿಲೀಫ್!
Wednesday, September 18, 2024
ಬೆಂಗಳೂರು: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕದೇ ಇರುವ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ದಂಡ ವಿಧಿಸಲು ಮುಂದಾಗುತ್ತಿದ್ದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಿದ್ದ ನ್ಯಾಯಾಲಯ ಈ ಹಿಂದೆಯೂ ಜನರ ಪರವಾಗಿ ನಿಂತಿದ್ದು, ಇದೀಗ ಹೈಕೋರ್ಟ್ ಮತ್ತೆ ನವೆಂಬರ್ 20 ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಿಸಿದೆ.
ಹಿರಿಯ ವಕೀಲ ದೇವದತ್ ಕಾಮತ್ ನಂಬರ್ ಪ್ಲೇಟ್ ಅಳವಡಿಕೆ ಮತ್ತೆ ಕಾಲಾವಕಾಶ ಕೋರಿದ್ದರು. ಇದನ್ನ ಮಾನ್ಯ ಉಚ್ಛ ನ್ಯಾಯಾಲಯವು ಪರಿಗಣಿಸಿದ್ದು, ನವೆಂಬರ್ 20 ರವರೆಗೆ ಅವಧಿ ವಿಸ್ತರಿಸಿದ್ದಲ್ಲದೇ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ನಿಗದಿಪಡಿಸಿದೆ. ಇದರಿಂದಾಗಿ ಸೆಪ್ಟಂಬರ್ 15ರ ಬಳಿಕ 500 ರೂಪಾಯಿ ದಂಡ ಪಾವತಿಸಬೇಕಾದ ಟೆನ್ಶನ್‌ನಲ್ಲಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ.