
MANGALORE: ಸನ್ನಿಧಿ ಕಶೆಕೋಡಿಗೆ ಯು.ಟಿ.ಖಾದರ್ ಶಹಬ್ಬಾಶ್ ಗಿರಿ...!!
Saturday, September 14, 2024
ಪುತ್ತೂರು: ಮತದಾನ, ಆರೋಗ್ಯ ಮತ್ತು ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪನೆ ಕುರಿತು ಮನೆ ಮನೆ ಹಾಗೂ ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿನೂತನ ರೀತಿಯಲ್ಲಿ ಅರಿವು ಮೂಡಿಸಿದ ಸನ್ನಿಧಿ ಕಶೆಕೋಡಿ ಬಾಲಕಿಯನ್ನ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಸನ್ಮಾನಿಸಿದರು.
ಬೆಂಗಳೂರಿನ ವಿಧಾನಸೌಧ ಕೊಠಡಿಯಲ್ಲಿ ಸನ್ನಿಧಿ ಕಶೆಕೋಡಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್, ನೀನು ದೇಶದಲ್ಲಿ ಒಳ್ಳೆಯ ಹೆಸರು ಮಾಡ್ತೀಯಾ ಎಂದು ಹಾರೈಸಿದರು. ಇದೇ ವೇಳೆ ಯು.ಟಿ. ಖಾದರ್ ಸರ್ ನೀವು ಕರ್ನಾಟಕದಲ್ಲಿ ಹೆಸರು ಮಾಡಿದಾಗೆ ದೇಶದಲ್ಲೂ ಹೆಸರು ಮಾಡಬೇಕು ಎಂದು ಹೇಳಿ ಅವರಿಗೂ ಶುಭಹಾರೈಸಿದಳು. ಈ ಸಂದರ್ಭದಲ್ಲಿ ಬಾಲಕಿಯ ತಂದೆ ಲೋಕೇಶ್ ಕಶೆಕೋಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು.