PUTTUR: ಬೆಂಗಳೂರು ಮೂಲದ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆ!!
ಪುತ್ತೂರು: ಲಾಡ್ಜ್ ಒಂದರಲ್ಲಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆಯಾಗಿರುವ ಘಟನೆ ಪುತ್ತೂರಿನ ನೆಹರೂ ನಗರದಲ್ಲಿ ನಡೆದಿದೆ. ಹಿಂದೂಪರ ಸಂಘಟನೆಗಳು ನೀಡಿದ ಮಾಹಿತಿ ಪ್ರಕಾರ ನೆಹರೂ ನಗರದ ಕೀರ್ತನಾ ಲಾಡ್ಜ್ ಗೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ಮಾಡಿದ್ದಾರೆ.
ಬಳಿಕ ಲಾಡ್ಜ್ ನ ದಾಖಲೆ ಪುಸ್ತಕ ಪರಿಶೀಲನೆ ಮಾಡಿದಾಗ ಜೋಡಿಯ ದಾಖಲೆ ಪಡೆಯದೆ ರೂಂ ನೀಡಿರುವುದು ಬೆಳಕಿಗೆ ಬಂದಿದೆ. ಕೆಲ ಕಾಲ ಲಾಡ್ಜ್ ಬಳಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಅನ್ಯಕೋಮಿನ ಜೋಡಿಯನ್ನು ಮನೆಗೆ ಕಳುಹಿಸಿದ್ದಾರೆ. ವಿಚಾರಣೆ ವೇಳೆ ಆ ಜೋಡಿ ಜಾಗ ಖರೀದಿ ಮಾಡಲು ಪುತ್ತೂರಿಗೆ ಬಂದಿದ್ದೇವೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಇದೇ ವೇಳೆ ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ರು. ಇದಾದ ಕೆಲಹೊತ್ತಿನ ಬಳಿಕ ಲಾಡ್ಜ್ ಸಿಬ್ಬಂದಿಗಳನ್ನ ವಿಚಾರಣೆಗಾಗಿ ಠಾಣೆಗೆ ಪೊಲೀಸರು ಕರೆದೊಯ್ದರು. ಮೂಲಗಳ ಪ್ರಕಾರ ಅನ್ಯಕೋಮಿನ ವಿವಾಹ ನೋಂದಣಿಯಾಗಿರುವುದಾಗಿ ಮಾಹಿತಿ ದೊರಕಿದೆ. ಬೆಂಗಳೂರು ಮೂಲದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿ ಎಂದು ತಿಳಿದುಬಂದಿದೆ.

