MANGALORE: ದೈವಾರಾಧನೆಗೆ ಅಪಮಾನ; ತಪ್ಪು ಕಾಣಿಕೆ ಹಾಕಿ ಕ್ಷಮೆ ಕೇಳುವಂತೆ ಒತ್ತಾಯ
Wednesday, August 14, 2024
ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ದೈವದ ಕಾರಣಿಕ ತೋರಿಸುವ ಕಾಂತಾರ ಸಿನಿಮಾ ಹಿಟ್ ಆದ ಬಳಿಕವಂತೂ ತುಳುನಾಡಿನ ದೈವಾರಾಧನೆ ಬಗ್ಗೆ ಹೊರಗಿನ ಜನರಿಗೂ ಆಸಕ್ತಿ ಹುಟ್ಟಿದೆ. ಆದ್ರೆ ದೈವಾರಾಧನೆಯನ್ನ ನಂಬುವ ತುಳುನಾಡಿನಲ್ಲೇ ದೈವವನ್ನ ಅಣಕಿಸಿ ಬೇಕಾಬಿಟ್ಟಿ ಕುಣಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು, ದೈವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ದೈವ ನರ್ತನಕ್ಕೆ ಸಂಬಂಧಿಸಿದ ಹಾಡೊಂದಕ್ಕೆ ಮಹಿಳೆಯೊಬ್ಬರು ಅಸಭ್ಯವಾಗಿ ಕುಣಿದು ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾರ್ಯಕ್ರಮ ಆಯೋಜನೆ ಮಾಡಿದ ಅವರ ಬಳಿ ದೈವ ಭಕ್ತರು ಕರೆ ಮಾಡಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ದೈವಾರಾಧನೆಯನ್ನ ಅಣಕಿಸಿದ ಮಹಿಳೆಯನ್ನ ಜಾರಂಧಾಯ ದೈವಸ್ಥಾನದ ಬಳಿ ಬಂದು ತಪ್ಪು ಕಾಣಿಕೆ ಹಾಕಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

