Puttur: ಪುತ್ತೂರು ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!? ಒತ್ತಡಕ್ಕೆ ಸಿಲುಕಿ ಹೇಳಿಕೆ ಕೊಟ್ಟಳಾ ವಿದ್ಯಾರ್ಥಿನಿ!?
ಪುತ್ತೂರು: ಭಾರೀ
ತಲ್ಲಣ ಮೂಡಿಸಿದ್ದ ಪ್ರಕರಣ ಇದೀಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಪುತ್ತೂರಿನ ಯೂತ್ ಕಾಂಗ್ರೆಸ್‌ನ
ನಗರ ಅಧ್ಯಕ್ಷ ಮೋನು ಬಪ್ಪಳಿಗೆ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋ ಪ್ರಕಾರ ವಿದ್ಯಾರ್ಥಿನಿಗೆ
ಯಾವುದೇ ಇರಿತ ಆಗಿಲ್ಲ. ಅಷ್ಟೇ ಅಲ್ಲದೇ, ಇಂದು ಬೆಳಗ್ಗೆ ಸಹಪಾಠಿಗಳ ಜೊತೆಗೆ ತೆರಳಿದ್ದ ಗಾಯಗೊಳಗಾದ
ವಿದ್ಯಾರ್ಥಿನಿ ಕಾಲೇಜು ತನಕ ಯಾವುದೇ ಆತಂಕವಿಲ್ಲದೇ ತೆರಳಿದ್ದಳು ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸರು
ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆಗೆ ಒಳಪಡಿಸಿದಾಗಲೂ ಇರಿತವಾಗಿದೆ ಎನ್ನಲಾದ ಘಟನೆಗೆ ಯಾವುದೇ
ಪೂರಕ ಸಾಕ್ಷ್ಯಗಳು ಲಭ್ಯವಾಗಿಲ್ಲ. ಅಷ್ಟೇ ಅಲ್ಲ, ವಿದ್ಯಾರ್ಥಿನಿ ಹಾಗೂ ಆರೋಪಿತ ವಿದ್ಯಾರ್ಥಿ ಬೇರೆ
ಬೇರೆಯದ್ದೇ ದಾರಿಯಲ್ಲಿ ಸಾಗಿದ್ದರು ಎನ್ನಲಾಗಿದೆ.
ಇನ್ನು ಗಾಯಾಳು ವಿದ್ಯಾರ್ಥಿನಿ ಹೇಳಿದಂತೆ ಆಕೆ ಯಾವುದೇ ಮಾರ್ಗ ಬದಲಾವಣೆಯನ್ನು ಮಾಡಿರಲಿಲ್ಲ. ಜೊತೆಗೆ ಪೊಲೀಸ್ ಮೂಲಗಳು ಕೂಡಾ ಇದೊಂದು ಸತ್ಯಕ್ಕೆ ದೂರವಾದ ವಿಚಾರ ಎಂದಿದ್ದಾರೆ. ಗಾಯಾಳು ಹಾಗೂ ಆಕೆಯ ಸ್ನೇಹಿತೆಯರ ಹೇಳಿಕೆ ಪಡೆದುಕೊಂಡಾಗ ಇದು ಇನ್ನಷ್ಟು ಸ್ಪಷ್ಟವಾಗಿದೆ ಎನ್ನಲಾಗಿದೆ. ಇದರಿಂದಾಗಿ ಅನಗತ್ಯ ಮಾನ ಕಳೆಯುವಂತಾಯಿತು ಎಂದು ಮುಸ್ಲಿಂ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒತ್ತಡ ಹೇರಲಾಯಿತೇ?
ಆರಂಭದಲ್ಲಿ ಈಕೆಗೆ
ಗಾಜು ತಾಗಿದ್ದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಅನ್ನೋ ಮಾಹಿತಿ ತಿಳಿದು ಬಂದಿದೆ.
ಆದರೆ, ಅನಂತರದಲ್ಲಿ ಈ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿತ್ತು. ಅಪ್ರಾಪ್ತ ವಿದ್ಯಾರ್ಥಿನಿಯನ್ನ
ಮುಂದಿರಿಸಿ ಕಾಲೇಜಿನ ವಿದ್ಯಾರ್ಥಿಯನ್ನೇ ಆರೋಪಿಯನ್ನಾಗಿಸಲು ಷಡ್ಯಂತ್ರ ನಡೆಯಿತೇ ಅನ್ನೋ ಅನುಮಾನ
ಶುರುವಾಗಿದೆ. ಆಕೆಗೆ ಒತ್ತಡ ಹೇರಿ ಚೂರಿ ಇರಿತದ ಕಥೆ ಕಟ್ಟಲಾಯಿತೇ ಅನ್ನೋ ಸಂಶಯವೂ ಮೂಡಿಸಿದೆ. ಪ್ರಕರಣ
ಸಂಬಂಧ ʼಬಿʼ ರಿಪೋರ್ಟ್ ಸಲ್ಲಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Puttur: ವಿದ್ಯಾರ್ಥಿನಿಗೆ ಇರಿತ ಪ್ರಕರಣ; ಬಂಧಿಸಲ್ಪಟ್ಟ ಹುಡುಗ ರಿಲೀಸ್! ಹೊಸ ತಿರುವು ಪಡೆದ ಕೇಸ್!!
ಪ್ರಕರಣವನ್ನು
ಅನಗತ್ಯ ಗೊಂದಲ ಸೃಷ್ಟಿಸುವಂತೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೆಲ ಸಂಘಟನೆಗಳು ಈಗಾಗಲೇ
ಒತ್ತಾಯ ಮಾಡಿದೆ. ಇನ್ನೂ ಈ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳೇ ಸ್ಪಷ್ಟ ಮಾಹಿತಿ ನೀಡಿದ್ದಲ್ಲಿ
ಗೊಂದಲ ನಿವಾರಣೆ ಆಗಬಹುದಾಗಿದೆ.