-->
Kinnigoli: 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಕೆಐಸಿಟಿಯಲ್ಲಿ ನಿವೃತ್ತ ಯೋಧ ಪಿ.ಎ. ಮೊಹಿದ್ದೀನ್‌ ಅವರಿಗೆ ಸನ್ಮಾನ

Kinnigoli: 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಕೆಐಸಿಟಿಯಲ್ಲಿ ನಿವೃತ್ತ ಯೋಧ ಪಿ.ಎ. ಮೊಹಿದ್ದೀನ್‌ ಅವರಿಗೆ ಸನ್ಮಾನ

 

ಕಿನ್ನಿಗೋಳಿ: ಕೆಐಸಿಟಿ ಹಾಗೂ ಎಂಸಿಟಿಸಿ ತಾಂತ್ರಿಕ ಮತ್ತು ಕಂಪ್ಯೂಟರ್‌ ಶಿಕ್ಷಣ ತರಬೇತಿ ಸಂಸ್ಥೆ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮಾಜಿ ಕಮಾಂಡೆಂಟ್‌ ಪಿ.ಎ. ಮೊಹಿದ್ದೀನ್‌ ಪಡುಬಿದ್ರಿ ಇವರು ಧ್ವಜಾರೋಹಣ ನಡೆಸಿದರು. ಇದೇ ಸಂದರ್ಭ ಸೇನೆಯಲ್ಲಿ ಸೇವೆ ಸಲ್ಲಿಸಿದ ಗೌರವಾರ್ಥವಾಗಿ ಪಿ.ಎ. ಮೊಹಿದ್ದೀನ್‌ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. 



ಭಾರತೀಯ ಸೇನೆಗೆ ಸೇರಬೇಕಾದರೆ ಇರುವ ಅರ್ಹತೆಯ ಕುರಿತ ಅಗತ್ಯ ಮಾಹಿತಿಯನ್ನು ಪಿ.ಎ. ಮೊಹಿದ್ದೀನ್‌ ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು. ಸಂಸ್ಥೆಯ ಪ್ರಾಂಶುಪಾಲ ನವೀನ್‌ ವೈ., ನಿರ್ದೇಶಕ ಹರ್ಷದ್‌ ಎಂ.ಎ., ಮರ್ಹೂಮ್‌ ಎಂ.ಎಚ್‌. ಅಬ್ಬಾಸ್‌ ಮೆಮೋರಿಯಲ್‌ ಸಂಸ್ಥೆಯ ಸದಸ್ಯ ಅನ್ಸಾರ್‌, ಸಂಸ್ಥೆಯ ಸಲಹಾ ಸಮಿತಿ ಸದಸ್ಯ ಪ್ರವೀಣ್‌ ಎರ್ಮಾಳ್‌ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನಡೆಯಿತು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. 


Ads on article

Advertise in articles 1

advertising articles 2

Advertise under the article