BELTHANGADY: ಮನೆಯಂಗಲದಲ್ಲೇ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ!!
Tuesday, August 20, 2024
ಬೆಳ್ತಂಗಡಿ: ಮನೆಯ ಅಂಗಲದಲ್ಲೇ ನಿವೃತ್ತ ಶಿಕ್ಷಕನೋರ್ವನ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆಯಾದ ವ್ಯಕ್ತಿ. ಮನೆಯ ಅಂಗಲದಲ್ಲೇ ಮಾರಕಾಸ್ತ್ರಗಳಿಂದ ಬಾಲಕೃಷ್ಣ ಅವರ ಮೇಲೆ ದಾಳಿ ಮಾಡಲಾಗಿದೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ನಿಗೂಢವಾಗಿದ್ದು, ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.