ಸಾಲ್ಮರದಲ್ಲಿ ಅಂಗಡಿಗೆ ಜಲ ದಿಗ್ಭಂಧನ!!
Saturday, July 6, 2024
ಪುತ್ತೂರು: ಪುತ್ತೂರಿನಾದ್ಯಂತ ಭಾರೀ ಗಾಳಿ ಮಳೆ ಅವಾಂತರವನ್ನ ಸೃಷ್ಠಿಮಾಡಿದೆ. ಬಿರುಸಿನ ಮಳೆಗೆ ಮೋರಿ ಬ್ಲಾಕ್ ಆಗಿ ನೀರು ಅಂಗಡಿಗೆ ನುಗ್ಗಿದ ಘಟನೆ ಪುತ್ತೂರಿನ ಸಾಲ್ಮರದಲ್ಲಿನಡೆದಿದೆ.
ಸೋಮನಾಥ ಎಂಬವರಿಗೆ ಸೇರಿದ ಅಂಗಡಿಗೆ ಜಲ ದಿಗ್ಭಂಧನ ಉಂಟಾಗಿದೆ. ಸೋಮನಾಥ ಅವರ ಅಂಗಡಿಗೆ 6ನೇ ಭಾರೀ ಮಳೆ ನೀರು ನುಗ್ಗಿರುವಂತದ್ದು. ಜಲಸಿರಿ ಪೈಪ್ ಲೈನ್ ಕಾಮಗಾರಿ ವೇಳೆ ಅಂಗಡಿ ಪಕ್ಕದಲ್ಲಿರುವ ಮೋರಿ ಬ್ಲಾಕ್ ಆಗಿದ್ದು, ಜಲಸಿರಿಯವರ ಅವೈಜ್ಞಾನಿಕ ಕಾಮಗಾರಿ ಮತ್ತು ಬೇಜವಾಬ್ದಾರಿಯಿಂದಾಗಿ ಮಳೆ ನೀರು ಮೋರಿಯಲ್ಲಿ ಬ್ಲಾಕ್ ಆಗಿ ಅಂಗಡಿ ನುಗ್ಗಿದೆ.
