-->
ಎಣ್ಮೂರು ಬೈದರ್ಕಳ ಗರಡಿ ಕೋಟಿ ದರ್ಶನ ಪಾತ್ರಿಯ ನಿಗೂಢ ಸಾವು!!

ಎಣ್ಮೂರು ಬೈದರ್ಕಳ ಗರಡಿ ಕೋಟಿ ದರ್ಶನ ಪಾತ್ರಿಯ ನಿಗೂಢ ಸಾವು!!



ಪೂಂಜಾಲಕಟ್ಟೆ: ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಎಣ್ಮೂರು ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ, ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್ ಬಾಬು ಪೂಜಾರಿ ಅವರ ಪುತ್ರ ಗಿರೀಶ್(37) ಅವರ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. 

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಗಿರೀಶ್ ಬುಧವಾರ ಮಧ್ಯರಾತ್ರಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಮನೆಯವರಲ್ಲಿ ಹೇಳಿ ಹೊರಟವರು ಬಳಿಕ ನಾಪತ್ತೆಯಾಗಿದ್ದಾರೆ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಬಜ್ಪೆ ಪೊಲೀಸರು ಅಡ್ಡೂರು-ಪೊಳಲಿ ಸೇತುವೆಯಲ್ಲಿ ಆಟೋ ಚಾಲನೆಯಲ್ಲಿ ಇರುವುದನ್ನ ಗಮನಿಸಿದ್ದಾರೆ. ಬಳಿಕ ಅ ಭಾಗದಲ್ಲಿ ಸ್ವಲ್ಪ ಹೊತ್ತುಗಳ ಕಾಲ ಹುಡುಕಿದರೂ ಚಾಲಕ ಪತ್ತೆಯಾಗಿರಲಿಲ್ಲ. ನಂತರ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರದ ಆಧಾರದಲ್ಲಿ ಅವರ ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ. ಇದಾದ ಬಳಿಕ ಗುರುವಾರ ನುರಿತ ಈಜುಗಾರರು ಆಗಮಿಸಿ ಫಲ್ಗುಣಿ ನದಿಯಲ್ಲಿ ಶೋಧ ಆರಂಭಿಸಿದ್ದರು. ಎಷ್ಟೇ ಹುಡುಕಾಟ ಮಾಡಿದ್ರೂ ಪತ್ತೆಯಾಗಿರಿಲಿಲ್ಲ. ಆದ್ರೆ ನಿನ್ನೆ ದಿನ ಶುಕ್ರವಾರ ಮತ್ತೆ ಕಾರ್ಯಾಚರಣೆ ಆರಂಭಿಸಿ ಸಂಜೆ ಆಗೋ ವೇಳೆಗೆ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಖಾಕಿ ಧರಿಸಿದ್ದ ವಸ್ತ್ರದಲ್ಲೇ ಮೃತದೇಹ ಪತ್ತೆಯಾಗಿದೆ.



ಇನ್ನು ನಾಪತ್ತೆ ಬಗ್ಗೆ ಪತ್ನಿ ತಾರಾ ಗುರುವಾರ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಎಣ್ಮೂರಿನ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನ ಪಾತ್ರಿಯಾಗಿ ಸೇವೆ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು, ಪತ್ನಿಯನ್ನ ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article