ಕುತ್ತಾರಿನಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್!!
ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿದಂತೆ ಸುನೀಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್. ರಾಹುಲ್ ಭೇಟಿ ನೀಡಿ ಕೋಲದಲ್ಲಿ ಭಾಗವಹಿಸಿದ್ದಾರೆ.
ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಈಗಾಗ್ಲೇ ಹಲವಾರು ಸೆಲೆಬ್ರೆಟಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಬಾಲಿವುಡ್ ದಂಡೇ ಆಗಮಿಸಿ ಕೋಲದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾತ್ರಿ ನಡೆದ ಕೋಲದಲ್ಲಿ ಪುರುಷರಿಗಷ್ಟೇ ಅವಕಾಶ ಇದ್ದ ಕಾರಣ ಮಹಿಳೆಯರು ಹೊರ ಬಂದಿದ್ದಾರೆ. ಈ ವೇಳೆ ಕ್ಷೇತ್ರದ ಕಚೇರಿಯಲ್ಲೇ ಕತ್ರಿನಾ ಕೈಫ್ ಕಾಣಿಸಿಕೊಂಡರು. ಇನ್ನು ಕತ್ರಿನಾ ಕೈಫ್ ದಂಪತಿ ಸೇರಿದಂತೆ ಸುನೀಲ್ ಶೆಟ್ಟಿ ಕುಟುಂಬ ಎರಡು ತಿಂಗಳ ಹಿಂದೆಯೇ ಹರಕೆ ರೂಪದಲ್ಲಿ ಕೋಲವನ್ನು ಬರೆಸಿದ್ದರು ಎನ್ನಲಾಗಿದೆ.
ಇವೆಲ್ಲದರ ನಡುವೆ ಕತ್ರಿನಾ ಕೈಫ್ ಗರ್ಭಿಣಿ ಎಂಬ ಗುಸು ಗುಸು ಬಾಲಿವುಡ್ ನಲ್ಲೂ ಕೇಳಿ ಬರ್ತಿದೆ. ಇದೀಗ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಕೈಮುಗಿದು ಪ್ರಾರ್ಥಿಸಿ ಒಳ್ಳೆಯ ಆಯುರಾರೋಗ್ಯ ನೀಡುವಂತೆ ಬೇಡಿಕೊಂಡಿದ್ದಾರೆ.
