ಬೊಲ್ವಾರ್ ನಲ್ಲೊಂದು ತಂಗುದಾಣದ ನಿರೀಕ್ಷೆಯಲ್ಲಿ ಪ್ರಯಾಣಿಕರು!!
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಸಂಪರ್ಕಿಸುವ ಬೊಲ್ವಾರ್ ನಲ್ಲಿ ಪ್ರಯಾಣಿಕರ ಕಷ್ಟ ಕೇಳುವಂತಿಲ್ಲ. ಹೌದು ಬೊಲ್ವಾರ್ ಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ಈ ಹಿಂದೆ ಬಸ್ ತಂಗುದಾಣವಿತ್ತು. ಆದ್ರೆ ರೋಡ್ ಅಗಲೀಕರಣದ ಕಾರಣದಿಂದ ಅಲ್ಲಿದ್ದ ತಂಗುದಾಣವನ್ನ ಕೆಡವಿ ತೆಗೆದುಹಾಕಲಾಗಿದೆ. ಇದರಿಂದಾಗಿ ಅಲ್ಲಿ ನಿತ್ಯ ಎಷ್ಟೋ ಪ್ರಯಾಣಿಕರು ಬಸ್ಸಿಗಾಗಿ ನಿಂತುಕೊಂಡೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಹೇಳಿ ಕೇಳಿ ಪುತ್ತೂರಿನ ಹೃದಯಭಾಗ ಬೊಲ್ವಾರ್ ನಲ್ಲಿ ಒಂದು ಬಸ್ ತಂಗುದಾಣ ಇಲ್ಲಂದ್ರೆ ನಗರದ ಅಭಿವೃದ್ಧಿಯಾದ್ರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಹರಿಪ್ರಸಾದ್ ನೆಲ್ಲಿಕಟ್ಟೆ, ಸಾಮಾಜಿಕ ಕಾರ್ಯಕರ್ತಅಷ್ಟೇ ಅಲ್ಲದೇ ಅದೆಷ್ಟೋ ಪ್ರಯಾಣಿಕರು ಅಲ್ಲಿ ರಸ್ತೆ ಬದಿಯಲ್ಲೇ ಬಸ್ ಗಾಗಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ತುಂಗುದಾಣ ಇರುವಾಗ ಬೇಸಗೆ-ಮಳೆಗಾಲವಾಗ್ಲೀ ಪ್ರಯಣಿಕರಿಗೊಂದು ಸಹಾಯವಾಗುತ್ತಿತ್ತು. ಆದ್ರೆ ಈಗ ತಂಗುದಾನ ಕೆಡವಿ ನಿತ್ಯ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.
ಹಾಗಾಗಿ ಆದಷ್ಟು ಬೇಗ ಸಂಬಂಧಪಟ್ಟ ಪುತ್ತೂರು ನಗರಸಭಾ ಅಧಿಕಾರಿಗಳು ಬೊಲ್ವಾರ್ ಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ತಂಗುದಾಣವನ್ನ ನಿರ್ಮಿಸಬೇಕಿದೆ ಎಂದು ಸಾರ್ವಜನಿಕರು ಮನವಿಯನ್ನ ಮಾಡಿದ್ದಾರೆ.
