-->
ಹಿಂದೂ ದ್ವೇಷ ಹೇಳಿಕೆ; ವಿಶ್ವ ಹಿಂದೂ ಪರಿಷತ್ ಖಂಡನೆ

ಹಿಂದೂ ದ್ವೇಷ ಹೇಳಿಕೆ; ವಿಶ್ವ ಹಿಂದೂ ಪರಿಷತ್ ಖಂಡನೆ



ಮಂಗಳೂರು: ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು" ಹಿಂದುಗಳೆಂದು ಹೇಳಿಕೊಳ್ಳುವವರು ನಿತ್ಯ ಹಿಂಸೆ ಮತ್ತು ದ್ವೇಷದಲ್ಲಿ ತೊಡಗಿದ್ದಾರೆ" ಎಂಬ ಹೇಳಿಕೆಯ ಮೂಲಕ ದೇಶದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಉದ್ದೇಶಪೂರ್ವಕ ಅಪಮಾನ ಮಾಡಿರೋದನ್ನ ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.

ಬಹುತೇಕ ಹಿಂದೂಗಳ ಮತಗಳಿಂದ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ತಮಗೆ ಜನರು ಆಯ್ಕೆ ಮಾಡಿ ಕಳಿಸಿದ ಸ್ಥಾನದ ದುರುಪಯೋಗ ಮಾಡಿರುವುದರಿಂದ ಲೋಕಸಭೆಯಲ್ಲಿ ಅಭಿವೃದ್ಧಿ ಉತ್ತಮ ಆಡಳಿತದ ಬಗ್ಗೆ ಮಾತನಾಡಲು ಸಿಕ್ಕ ಅವಕಾಶವನ್ನು ಹಿಂದುಗಳ ಅವಹೇಳನ ಮಾಡಿ ತನ್ನೊಳಗೆ ಹುದುಗಿರುವ ದ್ವೇಷ ಪೂರ್ವಕ ವ್ಯಕ್ತಿತ್ವವನ್ನು ಹೊರಗೆಡೆಹಿದ್ದಾರೆ. ದೇಶದ ಬಹು ಸಂಖ್ಯಾತರನ್ನು ದ್ವೇಷಿಸಿ ಹೀಯಾಳಿಸುವವರು ಲೋಕಸಭಾ ಸದಸ್ಯನಾಗಲು ನೈತಿಕವಾಗಿ ಅನರ್ಹನಾಗಿರುವುದರಿಂದ ತಕ್ಷಣ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಶ್ವ ಎಂದು ಪರಿಷತ್ ಆಗ್ರಹಿಸಿದೆ.

ಬಹುಸಂಖ್ಯಾತ ಹಿಂದೂಗಳಿಗೆ ಮಾಡಿದ ಅಪಮಾನಕ್ಕಾಗಿ ರಾಹುಲ್ ಗಾಂಧಿಯ ಮೇಲೆ ಸೂಕ್ತವಾದಂತಹ ಕ್ರಮವನ್ನು ಕೈಗೊಳ್ಳಬೇಕಾಗಿ ಲೋಕಸಭಾ ಸ್ಪೀಕರ್ ರವರನ್ನು  ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರು ಎಚ್.ಕೆ ಪುರುಷೋತ್ತಮ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article