ಮಂಗಳೂರಿನ ಅದ್ಯಾಪಾಡಿ ಗ್ರಾಮಕ್ಕೆ ಜಲದಿಗ್ಭಂಧನ!!
Thursday, July 18, 2024
ಮಂಗಳೂರು: ಭಾರೀ ಮಳೆಯಿಂದಾಗಿ ಮಂಗಳೂರು ತಾಲೂಕಿನ ಅದ್ಯಾಪಾಡಿ ಗ್ರಾಮ ಮುಳುಗಡೆಯಾಗಿದೆ. ನಿನ್ನೆ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೆರೆ ಬಂದು ಸಂಕಷ್ಟ ಉಂಟಾಗಿದೆ.
ಮನೆ, ಕೃಷಿ ತೋಟ, ಕೊಟ್ಟಿಗೆಗೆ ಜಲದಿಗ್ಭಂಧನ ಉಂಟಾಗಿದೆ. ನೆರೆಯಿಂದಾಗಿ ಹೊರಬರಲಾಗದೆ ಜನ ಆತಂಕದಲ್ಲಿದ್ದಾರೆ. ನಿನ್ನೆ ಸುರಿದಂತಹ ಭಾರೀ ಮಳೆಯಿಂದಾಗಿ ಫಲ್ಗುಣಿ ನದಿ ನೀರು ಆದ್ಯಪಾಡಿ ಗ್ರಾಮಕ್ಕೆ ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿದೆ.

