-->
ರಾಹುಲ್ ಗಾಂಧಿಗೆ ನಿಂದಿಸಿದ ಭರತ್ ಶೆಟ್ಟಿ; ಪುತ್ತೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ರಾಹುಲ್ ಗಾಂಧಿಗೆ ನಿಂದಿಸಿದ ಭರತ್ ಶೆಟ್ಟಿ; ಪುತ್ತೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪುತ್ತೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯವರ ಬಗ್ಗೆ ಶಾಸಕ ಭರತ್ ಶೆಟ್ಟಿ ಅವರು ಅವಹೇಳನಕಾರಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಮತ್ತು ಬಿಜೆಪಿ ಸುಳ್ಳಿನ ರಾಜಕಾರಣ ನಡೆಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಡಾಕ್ಟರ್ ಕಲಿತವರು, ವಿದ್ಯಾವಂತರು ಸಮಾಜದಲ್ಲಿ ಇನ್ನೊಬ್ಬರಿಗೆ ಯಾವ ರೀತಿಯಲ್ಲಿ ಗೌರವ ಕೊಡುವುದು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಭರತ್ ಶೆಟ್ಟಿಯವರೇ ಈಗ ನಿಮಗೆ ನಾಲ್ಕು ಜನ ಚಪ್ಪಾಳೆ ತಟ್ಟುತ್ತಾರೆ. ಅಧಿಕಾರ ಇರುವಾಗ ಜನ ಇದ್ದಾರೆ. ಅಧಿಕಾರ ಕಳಕೊಂಡಾಗ  ಯಾರಿದ್ದಾರೆಂದು ಎಂದು ಅವರು ಪ್ರಶ್ನಿಸಿದರು. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸ ಮಾಡಿ. ಭರತ್ ಶೆಟ್ಟಿಯವರು ಮೊದಲು ಜೆಡಿಎಸ್ ನಲ್ಲಿರುವಾಗ ಬಿಜೆಪಿಗೆ ಸಿಕ್ಕಾಪಟ್ಟೆ ಬೈಯುತ್ತಿದ್ದರು. ಅದೇ ರೀತಿ ಭಾರತದ ಪ್ರಧಾನಿ  ನರೇಂದ್ರ ಮೋದಿಯವರಿಗೆ ಈ ರೀತಿ ಮಾತನಾಡಿದರೆ. ಬಿಜೆಪಿಯವರು ಸುಮ್ಮನಿರುತ್ತಿದ್ದರಾ. ನಾವು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಪಾಠ ಮಾಡುತ್ತೇವೆ. ಹಾಗಾಗಿ ಇವತ್ತು ಶಾಸಕ ಭರತ್ ಶೆಟ್ಟಿಯವರಿಗೆ ಪಾಠ ಹೇಳಿ ಕೊಡುವ ಅಗತ್ಯವಿದೆ. ನೀವು ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಸಂವಿಧಾನಿಕ ವಿಚಾರದಲ್ಲಿ ನಾವು ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮಂತೆ ಕೆಟ್ಟ ಶಬ್ದ ಬಳಕೆ ಮಾಡುವುದಿಲ್ಲ. ನಾವು ನಿಮಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತೇವೆ ಎಂದರು. 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅವರು ಮಾತನಾಡಿ, ಮೋದಿ ಅಡಳಿತ ಬಂದ ಬಳಿಕ ಮಹತ್ಮಾಗಾಂಧೀಜಿ, ನೆಹರೂರವರನ್ನು ದೂಷಿಸಿದರು. ಗಣ್ಯ ವ್ಯಕ್ತಿಗಳನ್ನು ದೂಷಿಸಿದರು. ಯಾರು ಅವರ ವಿರುದ್ಧ ನಿಲ್ಲುತ್ತಾರೋ ಅವರನ್ನು ನಾಶ ಮಾಡುವ ಪ್ರಯತ್ನ ಆಗುತ್ತಿತ್ತು. ಅದು ನಿರಂತರವಾಗಿ ಮುಂದುವರಿದು ಇವತ್ತು ಭರತ್‌ ಶೆಟ್ಟಿಯವರು ಈ ಅವಹೇಳನ ಮಾತುಗಳನ್ನಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಸಂಸತ್, ವಿಧಾನಸಭೆಯ ಭದ್ರತೆಯ ಕುರಿತು ಗೊತ್ತಿದ್ದರೂ ಸಂಸತ್‌ನೊಳಗೆ ಹೋಗಿ ವಿರೋಧ ಪಕ್ಷದ ನಾಯಕನ ಕಪಾಳಕ್ಕೆ ಹೊಡೆಯುವ ಹೇಳಿಕೆ ದೇಶದ ಭದ್ರತೆಗೆ ಅಪಮಾನ ಮಾಡಿದಂತಾಗಿದೆ ಎಂದರು. ಅವಹೇಳನ ಕಾರಿಯಾಗಿ ಮಾತನಾಡುವ ಶಾಸಕ ಭರತ್‌ ಶೆಟ್ಟಿಯವರಿಗೆ ತಾಕತ್ತು ಧಮ್ಮು ಇದ್ದರೆ ರಾಹುಲ್ ಗಾಂಧಿಗೆ ಹೊಡೆದು ನೋಡಲಿ. ಇಲ್ಲಾ ನಮ್ಮಲ್ಲಿ ಕ್ಷಮೆ ಕೇಳಲಿ. ಅದು ಇಲ್ಲಾಂತಾದರೆ ನಾವು ನಿಮ್ಮನ್ನು ಲುಚ್ಚ, ಲಫಂಗ ಎಂದು ಹೇಳುತ್ತೇವೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಮ್,ಅಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಕರ್ನಾಟಕ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎನ್. ಚಂದ್ರಹಾಸ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂ‌ರ್ ಹಾಜಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ ಕೌಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕಿರಣ್ ರೈ,ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಪಾರೂಕ್ ಬಾಯಬ್ಬೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಬಶೀರ್ ಪರ್ಲಡ್ಕ, ನಗರ ಯುವಕಾಂಗ್ರೆಸ್‌ ಅಧ್ಯಕ್ಷ ಮೋನು ಬಪ್ಪಳಿಗೆ, ಜಿಲ್ಲಾ ಯುವಕಾಂಗ್ರೆಸ್ ಕಾರ್ಯದರ್ಶಿ ರಂಜಿತ್ ಬಂಗೇರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸಂತೋಷ್ ಭಂಡಾರಿ ಚಿಲ್ಕೆತ್ತಾರು, ಸುದೇಶ್ ಕುಮಾರ್ ಚಿಕ್ಕಪುತ್ತೂರು, ನೇಮಾಕ್ಷ ಸುವರ್ಣ, ಮನಮೋಹನ್‌, ನಗರಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ, ದಿನೇಶ್ ಶೇವಿರೆ, ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ಪುಡಾ ಅಧ್ಯಕ್ಷ ಭಾಸ್ಕ‌ರ್ ಗೌಡ ಕೋಡಿಂಬಾಳ, ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಅನ್ವ‌ರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಬೊಲೋಡಿ ಚಂದ್ರಹಾಸ ರೈ, ಕೌಶಲ್ ಪ್ರಸಾದ್ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article