
ಕರ್ಮಲದಲ್ಲಿ ತಿರುಗಾಡುತ್ತಿದ್ದ ನಿರಾಶ್ರಿತ ಗೋವುಗಳ ರಕ್ಷಣೆ!!
ಬನ್ನೂರು ಕರ್ಮಲದಲ್ಲಿರುವ ಬಲಮುರಿ ದೇವಸ್ಥಾನದ ಬಳಿಯಲ್ಲಿ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯ ಬದಿಯ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಗೋವುಗಳೆರಡು ಹಗಲು ರಾತ್ರಿ ಇರುವುದನ್ನು ಸ್ಥಳೀಯರಾದ ಎಂ.ಜಿ.ನಾಯಕ್ ಉಷಾ ದಂಪತಿ ಮತ್ತು ಅವರ ಪುತ್ರಿ ಡಾ. ದೀಕ್ಷಾ ಅವರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರಿಗೆ ಮಾಹಿತಿ ನೀಡಿದಂತೆ ಜು.27ರಂದು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಗೋವುಗಳಿರುವ ಸ್ಥಳಕ್ಕೆ ಭೇಟಿ ನೀಡಿ ಗೋವುಗಳೆರಡನ್ನು ತಾತ್ಕಾಲಿಕ ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋ ಶಾಲೆಯ ಬಳಿ ಬಿಡುವ ಕುರಿತು ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರಲ್ಲಿ ಅನುಮತಿ ಪಡೆದು ದೇವಳದ ಗೋ ಶಾಲೆ ಬಳಿ ಕಟ್ಟಿ ಹಾಕಲಾಗಿದೆ.
ವಾರಿಸುದಾರರು ಇದ್ದಲ್ಲಿ ಸಂಪರ್ಕಿಸಿ:
ಹದ ಕೆಂಪು ಬಣ್ಣ ಮತ್ತು ಕಪ್ಪು ಬಣ್ಣದ ಗೋವುಳೆರಡರ ಕತ್ತಿನಲ್ಲಿ ಸಣ್ಣ ಗಂಟೆ ಸಹಿತ ದಾರವಿದೆ. ಗೋವುಗಳ ವಾರಿಸುದಾರರು ಇದ್ದಲ್ಲಿ ಸರಿಯಾದ ಮಾಹಿತಿ ನೀಡಿ ಗೋವನ್ನು ಕರೆದೊಯ್ಯಬಹುದು ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಅವರು ತಿಳಿಸಿದ್ದಾರೆ.
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರ ನೇತೃತ್ವದಲ್ಲಿ ನಗರಸಭಾ ಸದಸ್ಯೆ ಪ್ರೇಮ ನಂದಿಲ, ಸ್ಥಳಿಯರಾದ ಶೇಖರ್, ಸಚಿನ್, ಪದ್ಮನಾಭ, ರವಿ, ರಾಜೇಶ್, ನಿರಂಜನ, ಆನಂದ ಮತ್ತು ಪಿಕಪ್ ಚಾಲಕ ರಾಜೇಶ್ ಗೋವುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಿದರು.