-->
ಸ್ಯಾಂಡಲ್ ವುಡ್ ನಟಿಯ ಬೇಡಿಕೆ ಈಡೇರಿಸಿದ ಕೊರಗಜ್ಜ

ಸ್ಯಾಂಡಲ್ ವುಡ್ ನಟಿಯ ಬೇಡಿಕೆ ಈಡೇರಿಸಿದ ಕೊರಗಜ್ಜ



ಉಳ್ಳಾಲ: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಟಿ ಮಾಲಶ್ರೀ ಹಾಗೂ ಅವರ ಪುತ್ರಿ ಅನನ್ಯಾ  ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.



' ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆನು. ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ ಎಂದರು.



ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ನ  ಟ್ರಸ್ಟೀಗಳು ನಟಿ ಮಾಲಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು.



Ads on article

Advertise in articles 1

advertising articles 2

Advertise under the article