ಉಡುಪಿ ವೀಡಿಯೋ ಕೇಸ್; ಎಸ್ ಐಟಿ ತನಿಖೆಗೆ ಒತ್ತಾಯ
ಮಂಗಳೂರು: ಉಡುಪಿ ವೀಡಿಯೋ ವಿವಾದದ ಬಗ್ಗೆ ನಿನ್ನೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಬಗ್ಗೆ ಶಾಸಕ ಭರತ್ ಶೆಟ್ಟಿ ಕಿಡಿ ಕಾರಿದ್ದಾರೆ. ಪ್ರಕರಣವನ್ನ ಎಸ್‌ಐಟಿಗೆ ವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಮಾತಿಗೆ ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ.
ಇದೀಗ ಸಿಎಂ ಹೇಳಿಕೆ ಬೆನ್ನಲ್ಲೇ ಕರಾವಳಿ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನ ಭೇಟಿಯಾಗಲು ಮುಂದಾಗಿದೆ. ಕಾಂಗ್ರೆಸ್ ನವರು ಉಡುಪಿ ವೀಡಿಯೋ ವಿವಾದವನ್ನ ಮಕ್ಕಳಾಟಿಕೆ ಎಂದ್ರು. ಗೃಹ ಸಚಿವರು, ಸಿಎಂ ಕೂಡ ಅದನ್ನೇ ಹೇಳ್ತಾರೆ. ಒತ್ತಡ ಇದ್ದ ಹಿನ್ನೆಲೆಯಲ್ಲಿ ಒಂದು ವಾರ ಬಿಟ್ಟು ಎಫ್ ಐ ಆರ್ ಹಾಕ್ತಾರೆ. ಹೀಗೆಲ್ಲ ಆಗುವಾಗ ಮಕ್ಕಳಾಟಿಕೆ ಎನ್ನುವವರು ಹೇಗೆ ಸರಿಯಾದ ತನಿಖೆ ಮಾಡಲು ಸಾಧ್ಯ ಅಂತ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಇನ್ನು ನಮಗೆ ಅಧಿಕಾರಿಗಳ ಬಗ್ಗೆ ಸಂಶಯವಿಲ್ಲ. ಆದ್ರೆ ಆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಕರಣದ ಹಾದಿ ತಪ್ಪಿಸುವ ಸಾಧ್ಯತೆಯಿದೆ. ಅದಕ್ಕಾಗಿ ನಾವು ಎಸ್ ಐಟಿ ತನಿಖೆಗೆ ಆಗ್ರಹಿಸುತ್ತೇವೆ. ಹಾಗಾಗಿ ಶುಕ್ರವಾರದಂದು ನಮ್ಮ ಕರಾವಳಿ ಶಾಸಕರ ನಿಯೋಗ ರಾಜ್ಯಪಾಲರನ್ನ ಭೇಟಿ ಮಾಡಲಿದ್ದೇವೆ ಎಂದು ಹೇಳಿದ್ರು.
