ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್| 'ಪಿಎಫ್ಐ ಮಾಸ್ಟರ್ ಟ್ರೈನರ್' ತುಫೈಲ್ ಸಹಿತ ಇಬ್ಬರ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್
ಆರೋಪಿಗಳಿಬ್ಬರು ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರಾಗಿದ್ದು, ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಸಂಚುಕೋರರಾಗಿದ್ದರು.
ತುಫೈಲ್ ಮೂಲತಃ ಕೊಡಗು ಜಿಲ್ಲೆಯವನಾಗಿದ್ದು ಪಿಎಫ್ಐ ಸಂಘಟನೆಯ 'ಹಿಟ್ ಸ್ಕ್ವಾಡ್' ಇದರ 'ಮಾಸ್ಟರ್ ಟ್ರೈನರ್' ಆಗಿ ಗುರುತಿಸಿಕೊಂಡಿದ್ದನು. ಇನ್ನು ಜಾಬಿರ್ ಪುತ್ತೂರು ಮೂಲದವನಾಗಿದ್ದು, ಮಸೂದ್ ಎಂಬ ಮುಸ್ಲಿಂ ಯುವಕನ ಹತ್ಯೆ ಸಂದರ್ಭ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದನು. ಅಲ್ಲದೇ, ಪುತ್ತೂರಿನ ಫ್ರೀಡಂ ಕಮ್ಯುನಿಟಿ ಕೇಂದ್ರದಲ್ಲಿ ನಡೆದ ಪ್ರವೀಣ್ ಹತ್ಯೆ ಸಂಚಿನಲ್ಲಿ ಜಾಬಿರ್ ಪಾಲ್ಗೊಂಡಿದ್ದನು. ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷನಾಗಿಯೂ ಕೆಲಸ ಮಾಡುತ್ತಿದ್ದನು ಎಂದು NIA ತಿಳಿಸಿದೆ.
ಜುಲೈ 26 ರಂದು ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿದ್ದರು. ಬೆಳ್ಳಾರೆ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು, ಬಳಿಕ ಆಗಸ್ಟ್ 4 ರಂದು NIA ವಹಿಸಿಕೊಂಡಿತ್ತು.
ಒಟ್ಟಾರೆಯಾಗಿ ಈ ಪ್ರಕರಣ ಸಂಬಂಧ ಒಟ್ಟು 21 ಮಂದಿ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಸಿದೆ.