ದ.ಕ. ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಂಯೇಷನ್ ಗೆ ಸುವರ್ಣ ಸಂಭ್ರಮ
ಮಂಗಳೂರು: ದ.ಕ. ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಂಯೇಷನ್ ನ ಸುವರ್ಣ ಮಹೋತ್ಸವದ ಅಂಗವಾಗಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನ ಅಧ್ಯಕ್ಷ ಆನಂದ್.ಕೆ. ಅವರು ಚಾಲನೆ ನೀಡಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ .ಎಂ, ಸುವರ್ಣ ಮಹೋತ್ಸವದ ಅಧ್ಯಕ್ಷ ಸತೀಶ್ ಭಟ್, ಕ್ರೀಡಾ ಸಂಚಾಲಕ ಸಂದೀಪ್ ಸಾಲ್ಯಾನ್, ಕ್ರೀಡಾ ಪದಾಧಿಕಾರಿ ಲೋಕೇಶ್ ಕಶೆಕೋಡಿ, ಸಂಜಯ್ ಎಕ್ಕೂರ್, ಸಂಘದ ಗೌರವ ಅಧ್ಯಕ್ಷ ದಿನೇಶ್ ಕುಂಪಲ, ಉದಯ್ ಕುಮಾರ್, ಸುರೇಶ್ ಸಾಲ್ಯಾನ್, ಶುಭಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಕೊಲ್ಯಾ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಈ ಪಂದ್ಯಾಕೂಟದಲ್ಲಿ ಹಲವಾರು ತಂಡ ಭಾಗವಹಿಸಿತ್ತು. ಕೊನೆಯಲ್ಲಿ ಸಿವಿ ನಾಯಕ್ ಪಾರ್ಕಿನ ಟ್ಯಾಕ್ಸಿಮನ್ ಸದಸ್ಯರು ಚಾಂಪಿಯನ್ ಆಗಿ ಹೊರಹೊಮ್ಮಿದರು. ದ್ವಿತೀಯ ಸ್ಥಾನಿಯಾಗಿ ಪಿವಿಎಸ್ ಪಾರ್ಕಿನ ತಂಡ ಹೊರಹೊಮ್ಮಿತು.



