
ಮಂಗಳೂರು: ಹಾಡುಹಗಲೇ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ!
Friday, February 3, 2023
ಮಂಗಳೂರು:
ನಗರದ ಹಂಪನಕಟ್ಟೆ ಬಳಿ ಇರುವ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಂಗಡಿ ಸಿಬ್ಬಂದಿಗೆ
ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ದುಷ್ಕರ್ಮಿಗಳ
ದಾಳಿಗೆ ಒಳಗಾದ ಮಳಿಗೆ ಸಿಬ್ಬಂದಿ ರಾಘವ ಆಚಾರ್ಯ (50) ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿ ಆಗಮಿಸಿದ
ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾಗಿ ತಿಳಿದು ಬಂದಿದೆ. ಮಧ್ಯಾಹ್ನ ವೇಳೆಗೆ ಆಗಮಿಸಿದ ದುಷ್ಕರ್ಮಿಗಳು
‘ಮಂಗಳೂರು ಜ್ಯುವೆಲ್ಲರ್ಸ್‘ ಒಳ ಹೊಕ್ಕಿದ್ದು ಬಳಿಕ ಚೂರಿಯಿಂದ ಇರಿದು ಬೈಕ್ ಏರಿ ಪರಾರಿಯಾಗಿದ್ದಾರೆ
ಎನ್ನಲಾಗಿದೆ.
ಗಂಭೀರ ಗಾಯಗೊಂಡಿದ್ದ
ಗಾಯಾಳನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು
ದೌಡಾಯಿಸಿ ಬಂದಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.