ಮಠಂದೂರಿಗೆ ದುಬಾರಿಯಾದ ‘ಅಣಬೆ‘ ಹೇಳಿಕೆ; ಶಾಸಕರ ‘ಸ್ಫೋಟಕ ಸೀಕ್ರೇಟ್‘ ರಿವೀಲ್ ಮಾಡ್ತೀವಿ ಎನ್ನುತ್ತಿದ್ದಾರೆ ಹಿಂದುತ್ವ ಕಾರ್ಯಕರ್ತರು!?
ಪುತ್ತೂರು:
ಅಮಿತ್ ಶಾ ಆಗಮನ ಹಿನ್ನೆಲೆ ಶುಭಕೋರಿದ ಅರುಣ್ ಕುಮಾರ್ ಪುತ್ತಿಲ ಅವರನ್ನ ಉದ್ದೇಶಿಸಿ ‘ಮಳೆಗಾಲದಲ್ಲಿ
ಅಣಬೆಗಳು ಹುಟ್ಟಿಕೊಳ್ಳುತ್ತವೆ‘ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ನೀಡಿರುವ ಹೇಳಿಕೆಗೆ ಆಕ್ರೋಶ
ವ್ಯಕ್ತವಾಗಿದೆ.
ಫೆಬ್ರವರಿ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು ಭೇಟಿ ಬೆನ್ನಲ್ಲೇ ಈ ವಿವಾದ ತಾರಕಕ್ಕೇರುವ ಸಾಧ್ಯತೆ ಇದೆ. ಅರುಣ್ ಕುಮಾರ್ ಪುತ್ತಿಲ ಕೂಡಾ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಗಮನ ಸೆಳೆಯುವ ನಿಟ್ಟಿನಲ್ಲಿ ಹಿಂದುತ್ವ ಕಾರ್ಯಕರ್ತರು ಇದನ್ನೇ ದೊಡ್ಡ ರಾದ್ಧಾಂತ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ಸಂಜೀವ ಮಠಂದೂರು ನೀಡಿರುವ ‘ಅಣಬೆ‘ ಹೇಳಿಕೆ ಅವರಿಗೆ ತಿರುಗು ಬಾಣವಾಗುವ ಸಾಧ್ಯತೆಯಿದೆ ಎಂದು ಪುತ್ತೂರಿನಾದ್ಯಂತ ಮಾತು ಕೇಳಿ ಬರ್ತಿದೆ. ಇದಕ್ಕೊಂದು ಉದಾಹರಣೆಯೇ ಅಮಿತ್ ಶಾ ಆಗಮನ ಪ್ರಚಾರಾರ್ಥ ನಡೆದ ಮೊದಲ ರ್ಯಾಲಿಯಲ್ಲಿಯೇ ಹಾಲಿ ಶಾಸಕರು ಹಿಂದೂ ಕಾರ್ಯಕರ್ತರಿಂದ ಮುತ್ತಿಗೆಯ ಬಿಸಿಯನ್ನ ಎದುರಿಸಬೇಕಾಯಿತು.
‘ಸ್ಫೋಟಕ ಸೀಕ್ರೇಟ್‘ ರಿವೀಲ್..!!?
ಹೌದು, ಇದೇ
ಬೆನ್ನಿಗೆ ಶಾಸಕರಿಗೆ ಸಂಬಂಧಿಸಿದ ‘ಸ್ಪೋಟಕ ಸೀಕ್ರೇಟ್‘ ವೊಂದನ್ನ ರಿವೀಲ್ ಮಾಡ್ತೀವಿ ಅಂತಾ ಕೆಲ ಕಾರ್ಯಕರ್ತರು
ಮಾತಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅದು ಎಂತಹ ‘ಸೀಕ್ರೇಟ್‘ ಅನ್ನೋದು ಸ್ಪಷ್ಟವಾಗಿಲ್ಲ.
ಒಂದು ವೇಳೆ ಆ ಸೀಕ್ರೇಟ್ ರಿವೀಲ್ ಆದಲ್ಲಿ ದೊಡ್ಡ ಮಟ್ಟಿನ ಡ್ಯಾಮೇಜ್ ಶಾಸಕರಿಗೆ ಎದುರಾಗಲಿದೆ. ಹೀಗೆ
ಆದ್ದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಮಠಂದೂರು ಕೈ ತಪ್ಪುವ ಸಾಧ್ಯತೆ ಅಧಿಕವಾಗಿದೆ.
ಒಟ್ಟಿನಲ್ಲಿ,
ಸಂಜೀವ ಮಠಂದೂರು ಅವರು ನೀಡಿದ ‘ಮಳೆಗಾಲದ ಅಣಬೆ‘ ಹೇಳಿಕೆಯು ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ
ಬಿಜೆಪಿ ಅಧ್ಯಕ್ಷರಾಗಿ, ಶಾಸಕರಾಗಿ ಜನರ ನಡುವೆ ಇರುವ ಹಾಲಿ ಪುತ್ತೂರು ಶಾಸಕರಿಗೆ ಮುಳುವಾಗುವ ಸಾಧ್ಯತೆ
ನಿಚ್ಚಳವಾಗಿದೆ.