ಕಂಬಳದಲ್ಲಿ ಕಿರುಕುಳ: ಯುವಕನ ಕಪಾಳಕ್ಕೆ ಬಿಗಿದ ಸಾನ್ಯಾ ಅಯ್ಯರ್; ಯುವಕನಿಂದಲೂ ಪ್ರತಿ ಹಲ್ಲೆ!? | ವೀಡಿಯೋ ವೈರಲ್
ಪುತ್ತೂರು:
ಕಂಬಳ ವೀಕ್ಷಣೆಗೆಂದು ಬಂದಿದ್ದ ನಟಿ ಸಾನ್ಯಾ ಅಯ್ಯರ್ ಕೈ ಹಿಡಿದೆಳೆದು ಕಿರುಕುಳ ನೀಡಿದ ಯುವಕನಿಗೆ
ಖುದ್ದು ನಟಿಯೇ ಕಪಾಳಮೋಕ್ಷ ನಡೆಸಿರುವ ಘಟನೆ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳದಲ್ಲಿ ನಡೆದಿದೆ.
ಕಂಬಳಕ್ಕೆ
ಅತಿಥಿಯಾಗಿ ಆಗಮಿಸಿದ್ದ ಸಾನ್ಯಾ ಬಳಿಕ ಮಧ್ಯರಾತ್ರಿ ಕಂಬಳ ವೀಕ್ಷಣೆಗಾಗಿ ಆಗಮಿಸಿದ್ದರು. ಈ
ವೇಳೆ ಸೆಲ್ಫಿ ತೆಗೆಯುವ ನೆಪದಲ್ಲಿ ಬಂದ ಯುವಕನೊಬ್ಬ
ಸಾನ್ಯ ಮತ್ತು ಸ್ನೇಹಿತೆಯರ ಕೈ ಎಳೆದು ಕಿರುಕುಳ ನೀಡಿದ್ಧಾಗಿ ಆರೋಪಿಸಲಾಗಿದೆ. ತಕ್ಷಣಕ್ಕೆ ಪ್ರತಿಕ್ರಿಯಿಸಿದ
ಸಾನ್ಯಾ ಕೈ ಹಿಡಿದೆಳೆದ ಯುವಕನ ಕಪಾಳಕ್ಕೆ ಬಾರಿಸಿದ್ದಾಗಿ ತಿಳಿದು ಬಂದಿದೆ. ಆದರೆ ಯುವಕ ಕೂಡಾ ಸಾನ್ಯಾ
ಮೇಲೆ ಕೈ ಮಾಡಿದ್ದಾಗಿ ಆರೋಪಿಸಲಾಗಿದೆ.
ಇಷ್ಟಾಗುತ್ತಲೇ
ಯುವಕನನ್ನು ಸ್ಥಳೀಯ ಆಟೋ ಚಾಲಕರು ಎಳೆದೊಯ್ದಿದ್ದು ಧರ್ಮದೇಟು ನೀಡಿದ್ದಾಗಿ ತಿಳಿದು ಬಂದಿದೆ. ಅಲ್ಲದೇ,
ಸಾನ್ಯಾ ಅಯ್ಯರ್ ಹಾಗೂ ಆಕೆಯ ಸ್ನೇಹಿತರು ಕಂಬಳ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣು
ಮಕ್ಕಳಿಗೆ ಗೌರವ ನೀಡುವುದನ್ನ ಕಲಿಸಿ ಎಂದು ತಾಕೀತು ಮಾಡಿದ್ದಾರೆ. ಸದ್ಯ ಈ ವೀಡಿಯೋ ಕೂಡಾ ವೈರಲ್
ಆಗಿದ್ದು, ಆದರೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.
ವೀಡಿಯೋ ವೀಕ್ಷಿಸಿ
