MNG: ಕಾಸರಗೋಡಿನಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ!!
Saturday, January 7, 2023
ಮಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಇಂದು ಮಂಗಳೂರಿಗೆ ಆಗಮಿಸಿದ್ರು. ಕೇರಳದ ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಸ್ತೆ ಮೂಲಕ ಕಾರಿನಲ್ಲಿ ಕಾಸರಗೋಡಿಗೆ ತೆರಳಿದರು. ಇನ್ನು ಮಹೇಂದ್ರ ಸಿಂಗ್ ಧೋನಿಯನ್ನ ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಸ್ವಾಗತಿಸಿದರು. ಭಾರೀ ಭದ್ರತೆಯೊಂದಿಗೆ ಕಾಸರಗೋಡಿಗೆ ತೆರಳಿದರು. ಧೋನಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿಬಿದ್ದರು.