ಮಂಗಳೂರು: ಸ್ಥಳೀಯ ಸಮಸ್ಯೆ ನಡುವೆ ಕಾರ್ಪೊರೇಟರ್ ಸಂಗೀತಾ ನಾಯಕ್ ಪತಿಯ ಕಿರಿಕ್!; ಅವಾಚ್ಯ ಶಬ್ದಗಳಿಂದ ಬೈದು ದರ್ಪ
Thursday, December 15, 2022
ಮಂಗಳೂರು: ಆಟದ ಮೈದಾನವೊಂದರ ಬಗ್ಗೆ ತಲೆದೋರಿದ ವಿವಾದದ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಪತಿ ಕಿರಿಕ್ ಮಾಡಿದ ಘಟನೆ ನಗರದ ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆದಿದೆ.
ಎರಡು ಎಕರೆ
ಸರಕಾರಿ ಜಾಗವನ್ನು ಈಗಾಗಲೇ ಆಟದ ಮೈದಾನವಾಗಿ ಪರವರ್ತಿಸಲಾಗಿದೆ. ಆದರೆ, ಗುರುವಾರ ಬೆಳಿಗ್ಗೆ ಏಕಾಏಕಿ
ಮೈದಾನದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸ್ಥಳೀಯರು ಕಾಮಗಾರಿಗೆ
ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ನಾಯಕ್ ಜನರಿಗೆ ಪರಿಸ್ಥಿತಿಯನ್ನು
ಮನವರಿಕೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಈ ವೇಳೆ ಕಾರ್ಪೊರೇಟರ್ ಪತಿ ಮಾತ್ರ ಗ್ರಾಮಸ್ಥರ ಮೇಲೆ
ಏರಿ ಹೋಗಿದ್ದು, ವಾಗ್ವಾದಕ್ಕೆ ಕಾರಣವಾಯಿತು. ಕಾರ್ಪೊರೇಟರ್ ಅವಾಚ್ಯ ಶಬ್ದಗಳಿಂದ ನಾಗರಿಕರನ್ನು ನಿಂದಿಸಿದ್ದು
ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.